ಸಿಎಂ ಯೋಗಿ ಕಾಲಿಗೆ ಬಿದ್ದ ರಜನಿಕಾಂತ್: ಇದು ಸರಿಯಾ ತಪ್ಪಾ ಎನ್ನುವ ಚರ್ಚೆ ಶುರು

ಭಾನುವಾರ, 20 ಆಗಸ್ಟ್ 2023 (09:09 IST)
Photo Courtesy: Twitter
ನವದೆಹಲಿ: ಉತ್ತರ ಪ್ರದೇಶ ಪ್ರವಾಸದಲ್ಲಿರುವ ಸೂಪರ್ ಸ್ಟಾರ್ ರಜನೀಕಾಂತ್ ಇದೀಗ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ರಜನೀಕಾಂತ್ ವಯಸ್ಸಿನಲ್ಲಿ ಯೋಗಿ ಆದಿತ್ಯನಾಥ್ ಅವರಿಗಿಂತ ದೊಡ್ಡವರು.ಹಾಗಿದ್ದರೂ ರಜನಿ ಯಾಕೆ ಯೋಗಿ ಆದಿತ್ಯನಾಥ್ ಕಾಲಿಗೆ ನಮಸ್ಕರಿಸಿದರು ಎಂದು ನೆಟ್ಟಿಗರು ಪರ-ವಿರೋಧ ಚರ್ಚೆ ಮಾಡುತ್ತಿದ್ದಾರೆ. ರಜನಿಕಾಂತ್ ಗೆ ಈಗ 72 ವರ್ಷ. ಸಿಎಂ ಯೋಗಿಗೆ 51 ವರ್ಷ. ಹಾಗಿದ್ದರೂ ಯೋಗಿ ಕಾಲಿಗೆ ನಮಸ್ಕರಿಸಿದ್ದು ಸರಿಯಲ್ಲ ಎಂದು ಕೆಲವರು ವಾದಿಸಿದ್ದಾರೆ.

ಆದರೆ ಯೋಗಿ ಆದಿತ್ಯನಾಥ್ ರಾಜಕೀಯ ರಂಗದಲ್ಲಿದ್ದರೂ ಮೂಲತಃ ಅವರು ಸನ್ಯಾಸತ್ವ ಸ್ವೀಕರಿಸಿದವರು. ಸನ್ಯಾಸತ್ವ ಸ್ವೀಕರಿಸಿದ ಮೇಲೆ ಆತನ ವಯಸ್ಸು ಪರಿಗಣನೆಗೆ ಬರುವುದಿಲ್ಲ. ಸ್ಥಾನಕ್ಕಷ್ಟೇ ಬೆಲೆ. ಹೀಗಾಗಿ ಅದೇ ಗೌರವದಿಂದ ರಜನಿ ಕಾಲಿಗೆ ನಮಸ್ಕರಿಸಿದ್ದರು. ಹೀಗಾಗಿ ಇದು ರಜನಿಯ ಸಂಸ್ಕೃತಿ ಸೂಚಿಸುತ್ತದೆ ಎಂದು ಇನ್ನು ಕೆಲವರು ವಾದಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ