ಶಿವರುದ್ರೆ ಗೌಡರ ಮಗಳ ಐಶ್ವರ್ಯಾ ಅಲ್ವಾ: ಕಿರಾತಕ ನಟಿಗೆ ಫ್ಯಾನ್ಸ್ ತರಾಟೆಗೆ ತೆಗೆದುಕೊಂಡಿದ್ಯಾಕೆ

Sampriya

ಭಾನುವಾರ, 6 ಏಪ್ರಿಲ್ 2025 (12:57 IST)
Photo Courtesy X
ನಟ ಯಶ್‌ಗೆ ಕಿರಾತಕ ಸಿನಿಮಾದಲ್ಲಿ ಜೋಡಿಯಾಗಿದ್ದ ನಟಿ ಓವಿಯಾ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇವಿಸಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದಲ್ಲದೆ ಈ ವಿಡಿಯೋ ಅವರೇ ತಮ್ಮ ಇನ್‌ಸ್ಟಾಗ್ರಾಂನ ಶೇರ್ ಮಾಡಿದ್ದಾರೆ.

ಇದನ್ನು ನೋಡಿದ ನೆಟ್ಟಿಗರು ಇವಳು  ನಮ್ಮ ಶಿವರುದ್ರೆ ಗೌಡರ ಮಗಳ ಐಶ್ವರ್ಯಾ ಅಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.

ಕನ್ನಡದ ಕಿರಾತಕ ಸಿನಿಮಾದಲ್ಲಿ ಹಳ್ಳಿ ಹುಡುಗಿಯಾಗಿ ಓವಿಯಾ ಅವರು ಮೆಚ್ಚುಗೆ ಗಳಿಸಿದ್ದರು. ಒಂದಲ್ಲ ಒಂದು ವಿವಾದಕ್ಕೆ ಸಿಲುಕುತ್ತಿರುವ ಓವಿಯಾ ಅವರು ಇದೀಗ  ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದು ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವಿಡಿಯೋದಲ್ಲಿ ಓವಿಯಾ ಬೀಚ್‌ ನಲ್ಲಿ ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು. ಅದಲ್ಲದೆ ಸುತ್ತಲಿನ ಪ್ರದೇಶವನ್ನು ಅವರು ತೋರಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ನಾಯಿಯನ್ನು ಮುದ್ದಾಡಿ, ಮೀನುಗಾರರನ್ನು ತೋರಿಸಿದ್ದಾರೆ. ಈ ವೇಳೆ ಸಿಗರೇಟ್ ಸೇವನೆ ಮಾಡುತ್ತಿರುವುದನ್ನು ಕೂಡಾ ತೋರಿಸಿದ್ದಾರೆ. ‌

ಇದನ್ನು ನೋಡಿದ ನೆಟ್ಟಿಗರು ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳಬೇಕಿದ್ದ ನಟಿ, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿ ಯಾವ ಸಂದೇಶ ಸಾರುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.

நம்ம #ஓவியா ஹா இது ???? #Oviya ???? #OviyaHelan pic.twitter.com/q2wja3viyD

— StepUp Media (@stepup_media) April 3, 2025



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ