ಸಿದ್ ಶ್ರೀರಾಮ್ ಹಾಡಿದ ಮೊದಲ ಕನ್ನಡ ಹಾಡು ರಿಲೀಸ್ ಡೇಟ್ ಫಿಕ್ಸ್

ಗುರುವಾರ, 1 ಏಪ್ರಿಲ್ 2021 (09:28 IST)
ಬೆಂಗಳೂರು: ತೆಲುಗು, ತಮಿಳಿನಲ್ಲಿ ಮೋಡಿ ಮಾಡಿರುವ ಗಾಯಕ ಸಿದ್ ಶ್ರೀರಾಮ್  ಮೊದಲ ಬಾರಿಗೆ ಕನ್ನಡದಲ್ಲಿ ಹಾಡಿರುವ ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.


ಸಾಮಜವರಗಮನ ಹಾಡಿನ ಖ್ಯಾತಿಯ ಸಿದ್ ಶ್ರೀರಾಮ್ ‘ಟ್ಯಾಮ್ ಆಂಡ್ ಜೆರಿ’ ಎನ್ನುವ ಕನ್ನಡ ಸಿನಿಮಾದಲ್ಲಿ ಮೊದಲ ಬಾರಿಗೆ ಹಾಡಿದ್ದಾರೆ. ಈ ಚಿತ್ರ ಕೆಜಿಎಫ್ ಖ್ಯಾತಿಯ ರಾಘವ್ ವಿನಯ್ ನಿರ್ದೇಶಿಸಿರುವ ಸಿನಿಮಾ. ಈ ಸಿನಿಮಾದ ‘ಹಾಯಾಗಿದೆ’ ಎಂಬ ಹಾಡನ್ನು ಸಿದ್ ಶ್ರೀರಾಮ್ ಹಾಡಿದ್ದಾರೆ.

ಇದು ಸಿದ್ ಗಾಯನದ ಮೊದಲ ಕನ್ನಡ ಸಿನಿಮಾ ಹಾಡು. ಇದು ಇದೇ ಏಪ್ರಿಲ್ 3 ರಂದು ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಸಂಜೆ 6 ಗಂಟೆಗೆ ಬಿಡುಗಡೆಯಾಗಲಿದೆ. ಈ ಸಿನಿಮಾಗೆ ಗಂಟು ಮೂಟೆ ಸಿನಿಮಾ ಖ್ಯಾತಿಯ ನಿಶ್ಚಿತ್ ಕರೋಡಿ ನಾಯಕನಾದರೆ, ನಾಯಕಿಯಾಗಿ ಜೋಡಿಹಕ್ಕಿ ಧಾರವಾಹಿ ಖ್ಯಾತಿಯ ಚೈತ್ರಾ ರಾವ್ ನಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ