ಸೈನಾ ನೆಹ್ವಾಲ್ ಗೆ ಕ್ಷಮೆ ಕೇಳಿದರೂ ಮುಗಿಯಲಿಲ್ಲ ಸಿದ್ಧಾರ್ಥ್ ಗೆ ಸಂಕಟ
ದ್ವಂದಾರ್ಥದ ಟ್ವೀಟ್ ಮಾಡಿ ಸೈನಾಗೆ ಅವಮಾನಿಸಿದ್ದ ಸಿದ್ಧಾರ್ಥ್ ನಿನ್ನೆ ಸುದೀರ್ಘ ಪತ್ರ ಮುಖೇನ ತಪ್ಪೊಪ್ಪಿಕೊಂಡು ಕ್ಷಮೆ ಯಾಚಿಸಿದ್ದರು. ಆದರೆ ಇಷ್ಟಕ್ಕೇ ಅವರಿಗೆ ಸಂಕಷ್ಟ ಮುಗಿಯಲಿಲ್ಲ.
ಮಹಿಳೆಯರ ಬಗ್ಗೆ ಈ ರೀತಿ ಕೀಳು ಅಭಿರುಚಿಯ ಕಾಮೆಂಟ್ ಮಾಡಿದ್ದಕ್ಕೆ ಸಿದ್ಧಾರ್ಥ್ ವಿರುದ್ಧ ಬಿಜೆಪಿ ನಾಯಕರಾದ ನೀಲಮ್ ಭಾರ್ಗವ ರಾಮ್ ಮತ್ತು ಪ್ರೇರಣಾ ಎಂಬವರು ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಇದೀಗ ತಮ್ಮ ಟ್ವೀಟ್ ನಿಂದಾಗಿ ಕಾನೂನು ಸಂಕಷ್ಟ ಎದುರಿಸಲಿದ್ದಾರೆ.