ಬೆಂಗಳೂರು: ಪರಪ್ಪನ ಅಗ್ರಹಾರದ ವಿಐಪಿ ಸೆಲ್‌ನಲ್ಲಿರುವ ನಟ ದರ್ಶನ್ ಅವರನ್ನು ಭೇಟಿಯಾಗಿ ಕೆಲಹೊತ್ತು ಮಾತನಾಡಿರುವುದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಸಿದ್ದಾರೂಢಗೆ ಇದೀಗ ಸಂಕಷ್ಟ ಎದುರಾಗಿದೆ.
ಸನ್ನಡತೆ ಆಧಾರದಲ್ಲಿ ಹೊರಬಂದಿರುವ ಸಿದ್ಧಾರೂಢ ದರ್ಶನ್ ಭೇಟಿ ಬಗ್ಗೆ ಕತೆ ಕಟ್ಟಿ ಹೇಳಿರುವುದಾಗಿ ಅನುಮಾನ ವ್ಯಕ್ತವಾಗುತ್ತಿದೆ.
ಈಚೆಗೆ ಜೈಲಿನಿಂದ ಹೊರಬಂದಿರುವ ಸಿದ್ದಾರೂಢ ಅವರು ಮಾಧ್ಯಮಗಳ ಬಳಿ ನಾನು ದರ್ಶನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ವಿಐಪಿ ಸೆಲ್‌ನಲ್ಲಿ ಅವರು ನರಕ ಅನುಭವಿಸುತ್ತಿದ್ದಾರೆ. ಅವರಿಗೆ ಪಶ್ಚಾತ್ತಾಪ ಕಾಡುತ್ತಿದೆ. ಒಂಟಿತನದಿಂದ ಯಾರಾದರೂ ಮಾತಿಗೆ ಸಿಕ್ಕರೂ ಸಾಕು ಎಂಬ ಭಾವನೆಯಲ್ಲಿದ್ದಾರೆ. ನಾನು ಭೇಟಿಗೆ ಹೋದಾಗ ನನ್ನನ್ನು ತಬ್ಬಿಕೊಂಡು, ನನ್ನ ಬಗ್ಗೆ ತಿಳಿದುಕೊಂಡರು. ದರ್ಶನ್ ಭೇಟಿಗೆ ಅವಕಾಶ ನೀಡುವಂತೆ ಜೈಲಾಧಿಕಾರಿಗಳ ಬಳಿ ಕೇಳಿಕೊಂಡೆ. ಅದರಂತೆ ನನಗೆ ಭೇಟಿಗೆ ಅವಕಾಶ ಸಿಕ್ಕಿದೆ ಎಂದು ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿದ್ದರೂಢ ಅವರು ದರ್ಶನ್ ಸ್ಥಿತಿಗತಿ ಬಗ್ಗೆ ಹೇಳಿರುವ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಪರಿಶೀಲಿಸಿದಾಗ ಸಿದ್ದರೂಢ ಅವರಿಗೆ ದರ್ಶನ್ ಅವರ ಭೇಟಿಗೆ ಅವಕಾಶವೇ ನೀಡಿಲ್ಲ ಎಂದು ತಿಳಿದು. ಇದು ಸಿದ್ದರೂಢ ಕಟ್ಟಿದ ಕಟ್ಟುಕತೆ ಎಂದು ಹೇಳಲಾಗಿದೆ.
ಅಂದಹಾಗೆ, ಜುಲೈ 8ರಂದು ಸಿದ್ಧಾರೂಢ ಬಳ್ಳಾರಿ ಜೈಲಿನಿಂದ ಸೆಂಟ್ರಲ್ ಜೈಲಿಗೆ ಬಂದಿದ್ದರು. 18 ಗಂಟೆಗಳ ಕಾಲ ಜೈಲಿನಲ್ಲಿ ಸಿದ್ಧರೂಢ ಇದ್ದಿದ್ದಾಗಿ ವರದಿಯಾಗಿದೆ. ಜು.9ರಂದು ಸನ್ನಡತೆಯ ಆಧಾರದ ಮೇಲೆಮ ಸಿದ್ದರೂಡ ಜೈಲಿಂದ ಬಿಡುಗಡೆಯಾಗಿದ್ದಾರೆ. ಈ ಕುರಿತು ಎರಡು ಕಡೆಯ ಜೈಲಾಧಿಕಾರಿಗಳಿಗೆ ಕಾರಾಗೃಹ ಇಲಾಖೆ ನೋಟಿಸ್ ನೀಡಿತ್ತು.