SIIMA 2024: ಐಶ್ವರ್ಯ ರೈಗೆ ಮಗಳೇ ದೊಡ್ಡ ಚಿಯರ್ ಲೀಡರ್, ಅದಕ್ಕೆ ಇಲ್ಲಿದೆ ಸಾಕ್ಷಿ

Sampriya

ಬುಧವಾರ, 18 ಸೆಪ್ಟಂಬರ್ 2024 (18:20 IST)
Photo Courtesy X
ಮಾಜಿ ವಿಶ್ವಸುಂದರಿ, ಕರಾವಳಿ ಬೆಡಗಿ ಐಶ್ವರ್ಯಾ ರೈ ಅವರು ತಾನು ಎಲ್ಲಿ ಹೋದರು ಮಗಳನ್ನು ಕರೆದುಕೊಂಡು ಹೋಗುತ್ತಾರೆ.  ಮಗಳನ್ನು ತುಂಬಾನೇ ಕೇರ್ ಮಾಡುವ ಐಶ್ವರ್ಯ, ಆಕೆಯ ಪ್ರತಿ ಕ್ಷಣವನ್ನು ಆನಂದಿಸುತ್ತಿರುತ್ತಾರೆ. ಇದಕ್ಕೆ ಸಾಕ್ಷಿ ಶಾಲೆಯಲ್ಲಿ ನಡೆದ ಇವೆಂಟ್‌ನಲ್ಲಿ ಮಗಳ ಪರ್ಫಾಮೆನ್ಸ್ ನೋಡಿ ಐಶ್ವರ್ಯ ಎಂಜಾಯ್ ಮಾಡಿದ್ದು.

ಇದೀಗ ಐಶ್ವರ್ಯ ಹಾಗೂ ಆರಾಧ್ಯಳ ನಡುವೆ ಇರುವ ಬಾಡಿಂಗ್ ದುಬೈನಲ್ಲಿ ನಡೆದ ಸೈಮಾ ಸಮಾರಂಭದಲ್ಲಿ ಸೆರೆಯಾಗಿದೆ. ತಾಯಿ ಪ್ರಶಸ್ತಿಯನ್ನು ಸ್ವೀಕರಿಸಲು ವೇದಿಕೆಗೆ ಹೋಗುತ್ತಿದ್ದ ಹಾಗೇ ಆರಾಧ್ಯ ಸಂಭ್ರಮಿಸಲು ಆರಂಭಿಸಿದ್ದಾಳೆ. ಅದಲ್ಲದೆ ತಾಯಿ ಪ್ರಶಸ್ತಿ ಸ್ವೀಕರಿಸುತ್ತಿರುವ ಕ್ಷಣವನ್ನು ಮೊಬೈಲ್‌ನಲ್ಲಿ ಸೆರೆ ಮಾಡಿದ್ದಾಳೆ. ಅದಲ್ಲದೆ ಅಮ್ಮನನ್ನು ಅಪ್ಪಿಕೊಂಡು, ಶುಭಕೋರಿದ್ದಾಳೆ.

ತಾಯಿ-ಮಗಳು ಈ ವರ್ಷ ಸೈಮಾ ಅವಾರ್ಡ್‌ ಸಮಾರಂಭದಲ್ಲಿ ಕಪ್ಪು ಬಟ್ಟೆಯಲ್ಲಿ ಮಿಂಚಿದ್ದು, ಫೋಟೋಗೆ ಪೋಸ್ ನೀಡಿದರು.

ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್: II ಚಿತ್ರದಲ್ಲಿನ ಪಾತ್ರಕ್ಕಾಗಿ ಪ್ರಮುಖ ಪಾತ್ರದಲ್ಲಿ (ವಿಮರ್ಶಕರು) ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಐಶ್ವರ್ಯಾ ಗೆದ್ದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ