ಡಿವೋರ್ಸ್‌ ಬಗ್ಗೆ ಕೊನೆಗೂ ಮೌನ ಮುರಿದ ಅಭಿಷೇಕ್ ಬಚ್ಚನ್

Sampriya

ಸೋಮವಾರ, 12 ಆಗಸ್ಟ್ 2024 (15:50 IST)
Photo Courtesy X
ಬೆಂಗಳೂರು: ಈಚೆಗೆ ಬಾಲಿವುಡ್‌ ಅಂಗಳದಲ್ಲಿ ಅಭಿಷೇಕ್ ಮತ್ತು ಐಶ್ವರ್ಯ ರೈ ಬಚ್ಚನ್ ಅವರ ಡಿವೋರ್ಸ್ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಈ ಸ್ಟಾರ್ ಜೋಡಿ ತಮ್ಮ 17 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಾರೆಂಬ ಸುದ್ದಿಯ ನಡುವೆ ಅಭಿಷೇಕ್ ಬಚ್ಚನ್ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ತನ್ನ ಮದುವೆಯ ಉಂಗುರವನ್ನು ತೋರಿಸುತ್ತಾ ಅಭಿಷೇಕ್ ಅವರು, "ಮದುವೆಯಾಗಿದ್ದೇನೆ" ಎಂದು ಹೇಳಿದರು. ಈ ವಿಚಾರದ ಬಗ್ಗೆ ನಿಮಗೆ ಹೆಚ್ಚೇನು ಹೇಳಬೇಕಾಗಿಲ್ಲ. ಈಗಾಗಲೇ ನೀವು ಈ ವಿಚಾರವನ್ನು ಸುದ್ದಿ ಮಾಡಿದ್ದೀರಿ. ನನಗೆ ನಿಮ್ಮ ಕಷ್ಟ ಅರ್ಥವಾಗುತ್ತದೆ. ನಿಮಗೆ ಕೆಲ ವರದಿಗಳು ಬೇಕಾಗಿದ್ದಾಗ ಈ ರೀತಿ ಮಾಡುತ್ತೀರಿ. ಪರವಾಗಿಲ್ಲ, ನಾವು ಸೆಲೆಬ್ರಿಟಿಗಳು, ನಾವು ಅದನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಈ ಮೂಲಕ ಅಭಿಷೇಕ್ ಹಾಗೂ ಐಶ್ವರ್ಯ ದಂಪತಿ ಬದುಕಿನಲ್ಲಿ ಎಲ್ಲವೂ ಸರಿಯಿದೆ ಎಂಬ ವಿಚಾರವನ್ನು ಹೊರಹಾಕಿದರು. ಕಳೆದ ಒಂದು ವರ್ಷದಿಂದ ಅಭಿಷೇಕ್ ಹಾಗೂ ಐಶ್ವರ್ಯ ದಂಪತಿ ಬದುಕಲ್ಲಿ ಎಲ್ಲವೂ ಸರಿಯಿಲ್ಲ ಎಂದು ಹೇಳಲಾಗುತ್ತಿದೆ. ಅದರಂತೆ ಈ ದಂಪತಿ ಈಚೆಗೆ ಅನಂತ್ ಅಂಬಾನಿ ಮದುವೆಯಲ್ಲಿ ಬೇರೆ ಬೇರೆಯಾಗಿ ಪೋಟೋಗೆ ಫೋಸ್‌ ಕೊಟ್ಟರು. ಅದಲ್ಲದೆ ಐಶ್ವರ್ಯ ತಮ್ಮ ಮಗಳ ಜತೆ ಈಚೆಗೆ ಸೋಲೋ ಟ್ರಿಪ್ ಮಾಡಿದ್ದು, ಊಹಾಪೋಹಕ್ಕೆ ಮತ್ತಷ್ಟು ಪುಷ್ಟಿ ನೀಡಿತ್ತು.

ಇದೀಗ ವಿಚ್ಛೇಧನ ಸುದ್ದಿ ಹರಡುತ್ತಿರುವ ಬಗ್ಗೆ ಅಭಿಷೇಕ್ ಪ್ರತಿಕ್ರಿಯಿಸಿ, ಇದೆಲ್ಲ ಸೆಲೆಬ್ರಿಟಿಗಳ ಬದುಕಿನಲ್ಲಿ ಸಾಮಾನ್ಯ ಎಂದಿದ್ದಾರೆ.

ನಟ ಅಭಿಷೇಕ್ ಬಚ್ಚನ್ ಮತ್ತು ಮಾಜಿ ವಿಶ್ವಸುಂದರಿ ಐಶ್ವರ್ಯ ರೈ 2007 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿ  ನವೆಂಬರ್ 2011 ರಲ್ಲಿ ತಮ್ಮ ಮಗಳು - ಆರಾಧ್ಯ  ಅವರನ್ನು ಸ್ವಾಗತಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ