ರಾಜೀವ್ ಗಾಂಧಿ ಹಂತಕನನ್ನು ಹಾಡಿ ಹೊಗಳಿ ಟೀಕೆಗೆ ಗುರಿಯಾದ ವಿಜಯ್‌

Sampriya

ಭಾನುವಾರ, 21 ಸೆಪ್ಟಂಬರ್ 2025 (13:57 IST)
Photo Credit X
ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಾಯಕ ನಟ ಕಮ್ ರಾಜಕಾರಣಿ ವಿಜಯ್ ಅವರು 1991 ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹಂತಕನನ್ನು ಕೊಂಡಾಡುವ ಮೂಲಕ ವಿವಾದಕ್ಕೀಡಾಗಿದ್ದಾರೆ. 

ತಮಿಳು ಈಳಂ ಲಿಬರೇಶನ್ ಟೈಗರ್ಸ್ (ಎಲ್‌ಟಿಟಿಇ) ದ ದಿವಂಗತ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಅವರನ್ನು ಹೊಗಳುವ ಮೂಲಕ ವಿಜಯ್ ಇದೀಗ ಟೀಕೆಗೆ ಗುರಿಯಾಗಿದ್ದಾರೆ. 

2026ರ ತಮಿಳುನಾಡು ಅಸೆಂಬ್ಲಿ ಚುನಾವಣೆಗಾಗಿ ತನ್ನ ರಾಜ್ಯಾದ್ಯಂತ ರಾಜಕೀಯ ಪ್ರಚಾರದ ಭಾಗವಾಗಿ ವಿಜಯ್ ಅವರು ನಾಗಪಟ್ಟಣಂನಲ್ಲಿ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ್ದರು. 

ಶ್ರೀಲಂಕಾ ತಮಿಳರಿಗೆ ಪ್ರಭಾಕರನ್ "ತಾಯಿಯಂತೆ" ಎಂದು ವಿಜಯ್ ಕೊಂಡಾಡಿದರು.  

ಅದೇ ಸಮಯದಲ್ಲಿ, ನಮ್ಮ ಹೊಕ್ಕುಳ ಬಳ್ಳಿಯ ಬಂಧುಗಳು, ಈಳಂ ತಮಿಳರು, ಅವರು ಶ್ರೀಲಂಕಾದಲ್ಲಿರಬಹುದು ಅಥವಾ ಪ್ರಪಂಚದ ಬೇರೆಲ್ಲಿಯೇ ಇರಲಿ, ತಾಯಿಯ ವಾತ್ಸಲ್ಯವನ್ನು ತೋರಿದ ನಾಯಕನನ್ನು ಕಳೆದುಕೊಂಡು ನರಳುತ್ತಿದ್ದಾರೆ. ಅವರ ಪರವಾಗಿ ಧ್ವನಿ ಎತ್ತುವುದು ನಮ್ಮ ಕರ್ತವ್ಯ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ