ಎರಡೂ ಧರ್ಮಕ್ಕೂ ಸಮಾನ ಗೌರವ: ಕ್ರಿಶ್ಚಿಯನ್ ಮದುವೆಗೆ ಮುನ್ನ ಸೋನಲ್ ಕುತ್ತಿಗೆಯಲ್ಲಿಲ್ಲ ಅರಶಿನ ದಾರ

Krishnaveni K

ಶನಿವಾರ, 31 ಆಗಸ್ಟ್ 2024 (14:53 IST)
Photo Credit: Instagram
ಮಂಗಳೂರು: ಮೊನ್ನೆಯಷ್ಟೇ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದ ನಟಿ ಸೋನಲ್ ಮೊಂಥೆರೋ ಮತ್ತು ನಿರ್ದೇಶ ತರುಣ್ ಸುಧೀರ್ ಈಗ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಲು ಹೊರಟಿದ್ದಾರೆ.

ನಾಳೆ ಮಂಗಳೂರಿನ ಚರ್ಚ್ ಒಂದರಲ್ಲಿ ಸೋನಲ್ ಮತ್ತು ತರುಣ್ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ನಿನ್ನೆಯಿಂದಲೇ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಿದೆ. ಹಿಂದೂ ಸಂಪ್ರದಾಯದಲ್ಲಿ ಹಳದಿ ಶಾಸ್ತ್ರ ಇದ್ದಂತೇ ಕ್ರಿಶ್ಚಿಯನ್ ಸಂಪ್ರದಾಯದಂತೆ ರೋಸ್ ಶಾಸ್ತ್ರ ಮಾಡಲಾಗಿದೆ.

ಸೋನಲ್ ಮನೆಯವರು ಮೂಲತಃ ಕ್ರಿಶ್ಚಿಯನ್ ಧರ್ಮೀಯರಾಗಿರುವುದರಿಂದ ಎರಡೂ ಸಂಪ್ರದಾಯದಂತೆ ಈ ಮದುವೆ ನಡೆಯುತ್ತಿದೆ. ಇನ್ನು, ಮೊನ್ನೆ ಹಿಂದೂ ಸಂಪ್ರದಾಯದಂತೆ ತಾಳಿ ಕಟ್ಟಿಸಿಕೊಂಡಿದ್ದ ಸೋನಲ್ ಈಗ ಮತ್ತೊಮ್ಮೆ ತರುಣ್ ಕೈಯಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ತಾಳಿ ಕಟ್ಟಿಸಿಕೊಳ್ಳಲಿದ್ದಾರೆ.

ಹೀಗಾಗಿ ಮೊನ್ನೆ ಮೊನ್ನೆವರೆಗೂ ಮದುವೆಯಲ್ಲಿ ಕಟ್ಟಿದ್ದ ಅರಶಿನ ದಾರವನ್ನು ಕುತ್ತಿಗೆಯಲ್ಲಿರಿಸಿಕೊಂಡಿದ್ದ ಸೋನಲ್ ಈಗ ಮತ್ತೊಮ್ಮೆ ಮದುವೆಯಾಗುತ್ತಿರುವ ಕಾರಣಕ್ಕೆ ನಡೆಯುತ್ತಿರುವ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಈ ಕಾರ್ಯಕ್ರಮದಲ್ಲಿ ಮೊದಲು ಕಟ್ಟಿದ್ದ ಅರಶಿನ ದಾರ ಕಂಡುಬಂದಿಲ್ಲ. ಮದುವೆ ದಿನ ಕಟ್ಟಿದ್ದ ತಾಳಿಯನ್ನು ಸೆಲೆಬ್ರಿಟಿಯರು ಸಾಮಾನ್ಯವಾಗಿ ತೆಗೆದಿಡುವುದು ಸಾಮಾನ್ಯ. ಆದರೆ ಸೋನಲ್ ಟಿವಿ ಶೋಗೆ ಬಂದಾಗಲೂ ಅದೇ ಅರಶಿನ ದಾರದಲ್ಲಿ ಬಂದಿದ್ದು ಅವರಿಗೆ ತಾಳಿ ಮೇಲಿನ ಗೌರವ ಎಂತಹದ್ದು ಎಂದು ತೋರಿಸುತ್ತಿತ್ತು. ಆದರೆ ಈಗ ಮತ್ತೊಮ್ಮೆ ಮದುವೆಯಾಗುತ್ತಿರುವ ಕಾರಣ ಮೊದಲಿನ ತಾಳಿ ಕಂಡುಬಂದಿಲ್ಲ. ವಿಶೇಷವೆಂದರೆ ತರುಣ್ ಕೂಡಾ ಹೇರ್ ಸ್ಟೈಲ್ ಬದಲಾಯಿಸಿಕೊಂಡು ಮಿಂಚುತ್ತಿದ್ದಾರೆ. ಮೊನ್ನೆವರೆಗೂ ಉದ್ದ ಕೂದಲು ಬಿಟ್ಟುಕೊಂಡಿದ್ದ ತರುಣ್ ಈಗ ಚಿಕ್ಕದಾಗಿ ಕೂದಲು ಟ್ರಿಮ್ ಮಾಡಿಕೊಂಡಿದ್ದು ನಾಳೆಯ ಮದುವೆಗೆ ಮತ್ತಷ್ಟು ಕಳೆ ಕಳೆಯಾಗಿ ಕಾಣಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ