ವಿವಾದಕ್ಕೆ ಕಾರಣವಾಗಿದೆ ಸೋನಂ-ಆನಂದ್ ಮದುವೆ

ಬುಧವಾರ, 16 ಮೇ 2018 (07:12 IST)
ಮುಂಬೈ : ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟ ಅನಿಲ್ ಕಪೂರ್ ಅವರ ಮಗಳು ನಟಿ ಸೋನಂ ಕಪೂರ್ ಅವರ  ಮದುವೆ  ಬಗ್ಗೆ ಇದೀಗ ವಿವಾದವೊಂದು  ಕೇಳಿಬಂದಿದೆ.


ಸೋನಂ-ಆನಂದ್ ಮದುವೆಯಲ್ಲಿ ಅಮೃತಸರದ ಸ್ವರ್ಣ ಮಂದಿರದಿಂದ ಸಿಖ್ ರ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್ ತರಿಸಲಾಗಿತ್ತು. ಇದು ಈಗ ಈ ವಿವಾದಕ್ಕೆ ಕಾರಣವಾಗಿದೆ. ಸೋನಂ ಪತಿ ಆನಂದ್ ಅವರು ಪವಿತ್ರ ಗ್ರಂಥಕ್ಕೆ ನಮಸ್ಕರಿಸುವಾಗ ತಮ್ಮ ಪೇಟಾದಲ್ಲಿದ್ದ ಕಲ್ಗಿಯನ್ನು (ಗರಿಗಳು) ತೆಗೆಯದೆ ಹಾಗೆ ನಮಸ್ಕರಿಸಿದ್ದಾರೆ.


ಇದು ಸಿಖ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದೆ ಎಂದು ಶಿರೋಮಣಿ ಗುರುದ್ವಾರ್ ಪ್ರಬಂಧಕ್ ಸಮಿತಿ ಮಾಜಿ ಕಾರ್ಯದರ್ಶಿಯೊಬ್ಬರು  ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸೋನಂ-ಆನಂದ್ ಮದುವೆ ಕಾರ್ಯಕ್ರಮದಲ್ಲಿ ಹಾಜರಿದ್ದ ಶಿರೋಮಣಿ ಗುರುದ್ವಾರ್ ಪ್ರಬಂಧಕ್ ಸಮಿತಿ ಸದಸ್ಯರು ಇದನ್ನು ನೋಡಿಯೂ ನೋಡದಂತಿದ್ದಾರೆ. ಆ ಕಾರಣದಿಂದ ಅವರ ವಿರುದ್ಧ ಕೂಡ ಕ್ರಮ ಕೈಗೊಳ್ಳುವಂತೆ ಶಿರೋಮಣಿ ಗುರುದ್ವಾರ್ ಪ್ರಬಂಧಕ್ ಸಮಿತಿ ಮಾಜಿ ಕಾರ್ಯದರ್ಶಿ ಅವರು ಒತ್ತಾಯಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ