ಮುಂಬೈ ಹೈಕೋರ್ಟ್ ನಲ್ಲಿ ಹಿನ್ನೆಡೆಯನ್ನು ಅನುಭವಿಸಿದ ನಟ ಸೋನು ಸೂದ್
ಶನಿವಾರ, 23 ಜನವರಿ 2021 (12:48 IST)
ಮುಂಬೈ : ಬಾಲಿವುಡ್ ನಟ ಸೋನು ಸೂದ್ ಅವರು ಸರ್ಕಾರಿ ಕಟ್ಟಡವನ್ನು ಹೋಟೆಲ್ ಆಗಿ ಪರಿವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಹೈಕೋರ್ಟ್ ನಲ್ಲಿ ಹಿನ್ನೆಡೆಯನ್ನು ಅನುಭವಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಪುರಸಭೆಯ ಅನುಮತಿಯನ್ನು ಪಡೆಯದೆ ಮುಂಬೈನ ಕಟ್ಟಡವನ್ನು ಹೋಟೆಲ್ ಆಗಿ ಬದಲಾಯಿಸಿದ್ದಾರೆ ಎಂದು ನಟ ಸೋನು ಸೂದ್ ವಿರುದ್ಧ ಆರೋಪಿಸಿ ಬಿಎಂಸಿ ಪೊಲೀಸರಿಗೆ ದೂರು ನೀಡಿದೆ. ಈ ಪ್ರಕರಣವನ್ನು ಪ್ರಶ್ನಿಸಿ ನಟ ಮುಂಬೈ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಸೋನು ಸೂದ್ ಅವರ ಅರ್ಜಿಯ ವಿಚಾರಣೆ ಮಾಡಿದ ಮುಂಬೈ ಹೈಕೋರ್ಟ್ ನ ನ್ಯಾಯಾಧೀಶರಾದ ಪೃಥ್ವಿರಾಜ್ ಚವಾಣ್ ಅವರು ಅರ್ಜಿಯನ್ನು ವಜಾಗೊಳಿಸಿದ್ದಾರೆ.