ರಶ್ಮಿಕಾ ಮಂದಣ್ಣ ಜೊತೆ ಡೇಟಿಂಗ್ ಬಗ್ಗೆ ಶ್ರೀನಿವಾಸ್ ಬೆಲ್ಲಮಕೊಂಡ ಹೇಳಿದ್ದೇನು?
ಇತ್ತೀಚೆಗೆ ಒಂದೆರಡು ಬಾರಿ ಇಬ್ಬರೂ ಜೊತೆಯಾಗಿ ಓಡಾಡಿದ್ದು ಪಪ್ಪಾರಾಜಿಗಳ ಕಣ್ಣಿಗೆ ಬಿದ್ದಿತ್ತು. ಹೀಗಾಗಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯಿತ್ತು. ಈ ಬಗ್ಗೆ ಇದೀಗ ಸ್ವತಃ ಶ್ರೀನಿವಾಸ್ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇಂತಹ ಸುದ್ದಿ ಹೇಗೆ ಬಂತೋ ನನಗೆ ಗೊತ್ತಿಲ್ಲ. ನಾವು ಡೇಟಿಂಗ್ ಮಾಡುತ್ತಿಲ್ಲ. ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್. ಎರಡು ಬಾರಿ ಅನಿರೀಕ್ಷಿತವಾಗಿ ವಿಮಾನ ನಿಲ್ದಾಣದಿಂದ ಹೊರಬರುವಾಗ ಕ್ಯಾಮರಾ ಕಣ್ಣಿಗೆ ಬಿದ್ದಿರಬಹುದು. ರಶ್ಮಿಕಾ ಲವಲವಿಕೆಯಿಂದಿರುತ್ತಾರೆ. ಜೊತೆಗೆ ತಮ್ಮ ಸುತ್ತಲಿದ್ದವರನ್ನೂ ಖುಷಿಯಾಗಿಡುತ್ತಾರೆ. ಅದು ಅವರ ಶಕ್ತಿ ಎಂದಿದ್ದಾರೆ.