ನಿರ್ದೇಶನಕ್ಕಿಳಿದ ಸೃಜನ್ ಲೋಕೇಶ್, ಪುತ್ರನೂ ಚಿತ್ರರಂಗಕ್ಕೆ ಎಂಟ್ರಿ
ಜಿಎಸ್ ಟಿ ಎನ್ನುವ ಸಿನಿಮಾವನ್ನು ಸೃಜನ್ ನಿರ್ದೇಶಿಸಲಿದ್ದಾರೆ. ಈ ಸಿನಿಮಾವನ್ನು ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ನಿರ್ಮಾಣ ಮಾಡಲಿದೆ.
ವಿಶೇಷವೆಂದರೆ ಈ ಸಿನಿಮಾದಲ್ಲಿ ಸೃಜನ್ ಪುತ್ರ ಸುಕೃತ್ ಕೂಡಾ ಅಭಿನಯಿಸಲಿದ್ದಾರೆ. ಆ ಮೂಲಕ ಲೋಕೇಶ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಕಾಲಿಟ್ಟಂತಾಗಲಿದೆ. ಈಗಾಗಲೇ ಮುಹೂರ್ತ ಕಾರ್ಯಕ್ರಮ ನೆರವೇರಿದೆ.