ಬಿಡುಗಡೆಗೂ ಮೊದಲೇ ಅವಾರ್ಡ್ ಗೆದ್ದ ಸೃಜನ್ ಲೋಕೇಶ್ ಸಿನಿಮಾ

ಗುರುವಾರ, 5 ಮಾರ್ಚ್ 2020 (11:14 IST)
ಬೆಂಗಳೂರು: ಸೃಜನ್ ಲೋಕೇಶ್ ಮತ್ತು ಮೇಘನಾ ಸರ್ಜಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದ ‘ಸೆಲ್ಫೀ ಮಮ್ಮೀ ಗೂಗಲ್ ಡ್ಯಾಡೀ’ ಎನ್ನುವ ಸಿನಿಮಾ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದಿದೆ.


ಈ ಸಿನಿಮಾ ಇನ್ನೂ ಥಿಯೇಟರ್ ಗೆ ಬಂದಿಲ್ಲ. ಮೊನ್ನೆಯಷ್ಟೇ ಟ್ರೈಲರ್ ಬಿಡುಗಡೆಯಾಗಿತ್ತು. ಇದಕ್ಕೆ ಭಾರೀ ಮೆಚ್ಚುಗೆಯೂ ಬಂದಿತ್ತು. ಈಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದಿದೆ.

ಇನ್ನು, ಪುನೀತ್ ರಾಜಕುಮಾರ್ ಹೋಂ ಬ್ಯಾನರ್ ನಲ್ಲಿ ನಿರ್ಮಾಣವಾಗಿದ್ದ ಕವಲು ದಾರಿ ಉತ್ತಮ ಕನ್ನಡ ಚಿತ್ರ ಪ್ರಶಸ್ತಿ ಪಡೆದರೆ, ದ್ವಿತೀಯ ಕನ್ನಡ ಚಿತ್ರವಾಗಿ ರಿಷಬ್ ಶೆಟ್ಟಿ ಅಭಿನಯದ ‘ಬೆಲ್ ಬಾಟಂ’ ಪ್ರಶಸ್ತಿ ಗೆದ್ದುಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ