ಏಪ್ರಿಲ್ 28ರ ಬಳಿಕ ಪ್ರಭಾಸ್ ಮದುವೆ ಸಿದ್ಧತೆ

ಶನಿವಾರ, 18 ಮಾರ್ಚ್ 2017 (12:00 IST)
ಟಾಲಿವುಡ್`ನ ಖ್ಯಾತ ನಟ, ಬಾಹುಬಲಿ ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ನಟ ಪ್ರಭಾಸ್ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿದ್ದಾರಂತೆ. ಏಪ್ರಿಲ್ 28ಕ್ಕೆ ಬಹುನಿರೀಕ್ಷಿತ ಬಾಹಬಲಿ-2 ಸಿನಿಮಾ ತೆರೆ ಕಾಣುತ್ತಿದ್ದು, ಇದಾದ ಬಳಿಕ ಮದುವೆ ಸಿದ್ಧತೆ ನಡೆಯಲಿದೆಯಂತೆ.
 

ಈಗಾಗಲೇ ಬಾಹುಬಲಿಯನ್ನ ಕೈಹಿಡಿಯುವ ಹುಡುಗಿಯನ್ನ ಪೋಷಕರೇ ಹುಡುಕಿದ್ದು, ಗೌಪ್ಯವಾಗಿಡಲು ನಿರ್ಧರಿಸಿದ್ದಾರೆ. ಚಿತ್ರ ತೆರೆಕಂಡ ಬಳಿಕ ಎಲ್ಲವೂ ಬಹಿರಂಗವಾಗಲಿದೆ. ಪ್ರಭಾಸ್ ಕೈಹಿಡಿಯಲಿರುವ ಹುಡುಗಿ ಚಿತ್ರರಂಗಕ್ಕೆ ಸಂಬಂಧಿಸಿದಳಲ್ಲ ಎನ್ನಲಾಗಿದೆ.

ಮದುವೆ ಸಮಾರಂಭವೂ ಸಹ ಕುಟುಂಬದ ಸಮ್ಮುಖದಲ್ಲಿ ಖಾಸಗಿಯಾಗಿ ನಡೆಯಲಿದ್ದು, ಯಾವುದೇ ಪ್ರಚಾರಕ್ಕೆ ಅವಕಾಶವಿಲ್ಲ  ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ