ಲೇಡಿ ಆರ್ಮುಗಂ ಗೆ ಕೆಂಪೇಗೌಡ ಹ್ಯಾಟ್ಸ್ ಆಫ್

ಬುಧವಾರ, 28 ಜೂನ್ 2017 (11:35 IST)
ಬೆಂಗಳೂರು: ಕೆಂಪೇಗೌಡ ಚಿತ್ರದಲ್ಲಿ ಆರ್ಮುಗಂ ಆಗಿ ಅಭಿನಯಿಸಿರುವ ರವಿಶಂಕರ್ ಅವರ ಖಡಕ್ ಡೈಲಾಗ್ ನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ. ಅದರಲ್ಲೂ ’ಇದು ಆರ್ಮುಗಂ ಕೋಟೆ ಕಣ” ಎಂಬ ಡೈಲಾಗ್ ಈಗಲೂ ಜರನ್ನು ಒಮ್ಮೆ ಬಡಿದೆಬ್ಬಿಸುತ್ತೆ... ಈಗ ಈ ವಿಷಯದ ಯಾಕೆ ಹೇಳ್ತಿದೀವಿ ಅಂದ್ರೆ ಅದೇ ಕೆಪೇಂಗೌಡ ಚಿತ್ರದ ಆರ್ಮುಗಂ ರವಿಶಂಕರ್ ಅವರ ಡೈಲಾಗ್ ನ್ನು ಒಬ್ಬ ಯುವತಿ ಹೇಳಿದ್ರೆ ಹೇಗಿರತ್ತೆ..  ಯುವತಿಯೋರ್ವಳು ಈ ಖಡಕ್ ಡೈಲಾಗ್ ಹೇಳಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಲಲ್ಲಿ ವೈರಲ್ ಆಗಿದೆ.
 
ಆಡಿಶನ್ ಒಂದರಲ್ಲಿ ಯುವತಿ ಆರ್ಮುಗಂ ಡೈಲಾಗ್ ನ್ನು ರವಿಶಂಕರ್ ಸ್ಟೈಲ್ ನಲ್ಲೇ ಅದೇ ಖದರ್ ನಲ್ಲೇ, ಖಡಕ್ ಆಗಿ  ಹೇಳಿದ್ದು ಈಗ ಭರ್ಜರಿ ಫೇಮಸ್ ಆಗಿದೆ. ಈಕೆಯ ಜಬರ್ದಸ್ತ್ ಡೈಲಾಗ್ ಡೆಲೆವರಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವತಿ ಲೇಡಿ ಆರ್ಮುಗಂ ಎಂದೇ ಫೇಮಸ್ ಆಗಿದ್ದಾಳೆ.
 
ಈ ವಿಡಿಯೋ ಈಗ ಕಿಚ್ಚ ಸುದೀಪ್ ಕಣ್ಣಿಗೂ ಬಿದ್ದಿದ್ದು, ವಿಡಿಯೋದಲ್ಲಿ ಯುವತಿಯ ಜಬರ್ದಸ್ತ್ ಖಡಕ್ ನಟನೆಗೆ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹ್ಯಾಟ್ಸ್ ಆಫ್ ಎಂದು ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ