ವಿದೇಶದಲ್ಲಿ ದರೋಡೆಗೊಳಗಾದ ಮಗನ ನೆರವಿಗೆ ಟ್ವಿಟ್ಟರ್`ನಲ್ಲಿ ಮೊರೆ ಇಟ್ಟ ಸುಹಾಸಿನಿ

ಸೋಮವಾರ, 28 ಆಗಸ್ಟ್ 2017 (16:59 IST)
ಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಂ ಮತ್ತು ಸುಹಾಸಿನಿ ಪುತ್ರ ನಂದನ್ ಇಟಲಿಯಲ್ಲಿ ದರೋಡೆಗೆ ಒಳಗಾಗಿದ್ದಾರೆ. ಸರಣಿ ಟ್ವಿಟ್`ಗಳಲ್ಲಿ ಸುಹಾಸಿನಿ ಮಣಿರತ್ನಂ ಮಗನ ನೆರವಿಗೆ ಧಾವಿಸುವಂತೆ ಮನವಿ ಮಾಡಿದ್ದಾರೆ.
 

ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಬೆಲ್ಲುನೋದಲ್ಲಿ ನನ್ನ ಮಗ ನಂದನ್`ನನ್ನ ದರೋಡೆ ಮಾಡಲಾಗಿದ್ದು, ಅವನು ಏರ್`ಪೋರ್ಟ್`ಗೆ ತೆರಳಲು ಸಹಾಯ ಮಾಡಿ. ವೆನೀಸ್ ಏರ್`ಪೋರ್ಟ್ ಬಳಿ ಯಾರಾದರೂ ಭಾರತೀಯರಿದ್ದರೆ. ನನ್ನ ಮಗನಿಗೆ ಸಹಾಯ ಮಾಡಿ ಎಂದು ಸರಣಿ ಟ್ವೀಟ್ ಮಾಡಿದ್ದರು.   

ಬಳಿಕ ಮಗ ಇರುವ ಸ್ಥಳದ ಬಗ್ಗೆಯೂ ಸುಹಾಸಿನಿ ಟ್ವಿಟ್ ಮಾಡಿದ್ದರು. ವೆನಿಸ್`ನ ಸೆಮಟ್ ಮಾರ್ಕ್ ರೋಡ್ ಪೊಲೀಸ್ ಠಾಣೆ ಬಳಿ ಯಾರಾದರೂ ಇದ್ದರೆ ಮಗ ನೆರಿಗೆ ಬನ್ನಿ. ಸಹಾಯ ಮಾಡದಿರುವವರು ದಯವಿಟ್ಟು ಅವನಿಗೆ ಕರೆ ಮಾಡಬೇಡಿ. ಭಾರತದಿಂದಲೂ ಯಾರೂ ಸುಮ್ಮನೆ ಕರೆ ಮಾಡಬೇಡಿ. ನೀವು ಮಾಡುವ ಕರೆಯಿಂದ ಅವನ ಮೊಬೈಲ್ ಬ್ಯಾಟರಿ ಮುಗಿದುಹೋಗಿ ಸಂಪರ್ಕಕಕ್ಕೆ ಸಿಗದೇ ಹೋಗಬಹುದು ಎಂದು ಮನವಿ ಮಾಡಿದ್ದರು.

 ಇದಾದ ಒಂದು ಗಂಟೆ ಬಳಿಕ  ನನ್ನ ಮಗನಿಗೆ ನೆರವು ನೀಡಲು ಹೊರಟಿರುವವರು ದಾರಿ ಮಧ್ಯೆ ಇದ್ದಾರೆ. ಥ್ಯಾಂಕ್ಯೂ ಫಾರ್ ಹೆಲ್ಪ್ ಎಂದು ಟ್ವೀಟ್ ಮಾಡಿದ್ದರು. ಇದೀಗ, ಲೇಟೆಸ್ಟ್ ಅಪ್ಡೇಟ್ ಮಾಡಿರುವ ಸುಹಾಸಿನಿ. ನನ್ನ ಮಗ ಹೋಟೆಲ್ ಸೇರಿದ್ದಾನೆ. ಅವನು ಸುರಕ್ಷಿತವಾಗಿದ್ದಾನೆ ಎಂದು ಟ್ವಿಟ್ ಮಾಡಿದ್ದಾರೆ.
ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ppl who can't help in venice pls don't call the number i posted earlier as your drain out his battery & he ll lose contact

— Suhasini Maniratnam (@hasinimani) August 27, 2017

 

Our son checked into a hotel. He is safe tonight

— Suhasini Maniratnam (@hasinimani) August 27, 2017

ವೆಬ್ದುನಿಯಾವನ್ನು ಓದಿ