ನಕಲಿ ಅಭಿಷೇಕ್ ಅಂಬರೀಶ್ ಗೆ ಸುಮಲತಾ ಅಂಬರೀಶ್ ಹೇಳಿದ್ದೇನು?

ಸೋಮವಾರ, 10 ಡಿಸೆಂಬರ್ 2018 (09:28 IST)
ಬೆಂಗಳೂರು: ಇತ್ತೀಚೆಗೆ ಸೆಲೆಬ್ರಿಟಿಗಳು ಅವರ ಮಕ್ಕಳ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ನಕಲಿ ಖಾತೆಗಳ ಹಾವಳಿ ಜೋರಾಗುತ್ತಿದೆ. ಇದೀಗ ಅಂಬರೀಶ್ ಪುತ್ರ ಅಭಿಷೇಕ್ ಹೆಸರಿನಲ್ಲಿ ಬಂದ ಟ್ವಿಟರ್ ಖಾತೆಯೊಂದರ ಬಗ್ಗೆ ಸುಮಲತಾ ಅಂಬರೀಷ್ ಸ್ಪಷ್ಟನೆ ಕೊಟ್ಟಿದ್ದಾರೆ.


ಅಂಬರೀಶ್ ನಿಧನರಾದ ಬಳಿಕ ಮಾಧ್ಯಮಗಳಲ್ಲಿ ಸಾಕಷ್ಟು ಕಾಣಿಸಿಕೊಂಡಿದ್ದ ಅಭಿಷೇಕ್ ಹೆಸರಿನಲ್ಲಿ ಟ್ವಿಟರ್ ನಲ್ಲಿ ನಕಲಿ ಖಾತೆಯೊಂದನ್ನು ತೆರೆಯಲಾಗಿದೆ. #AbhishekAmbareesh ಹೆಸರಿನ ಈ ಖಾತೆ ದುರುಪಯೋಗವಾಗುವ ಮೊದಲೇ ಸುಮಲತಾ ಇದರ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

‘ಅಭಿ ಇದುವರೆಗೆ ಯಾವುದೇ ಟ್ವಿಟರ್ ಖಾತೆ ತೆರೆದಿಲ್ಲ. ಈ ಹೆಸರಿನ ಖಾತೆ ಅಭಿಯದ್ದಲ್ಲ. ದಯವಿಟ್ಟು ಇದನ್ನು ನಂಬಿ ಫಾಲೋ ಮಾಡಬೇಡಿ’ ಎಂದು ಸುಮಲತಾ ಸ್ಪಷ್ಟನೆ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ