ಶಶಿ ತರೂರ್ ಮಾಡಿದ ಒಂದೇ ಒಂದು ಸ್ಪೆಲ್ಲಿಂಗ್ ಮಿಸ್ಟೇಕ್ ನಿಂದ ಎಡವಟ್ಟಾಯ್ತು!
ಸೋಮವಾರ, 12 ನವೆಂಬರ್ 2018 (09:49 IST)
ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಇಂಗ್ಲಿಷ್ ಪಾಂಡಿತ್ಯದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಅವರ ವಿದೇಶೀ ಉಚ್ಛಾರಣೆಯ ಇಂಗ್ಲಿಷ್ ಆಕರ್ಷಕವಾಗಿದೆ. ಆದರೆ ಅದೇನು ಗ್ರಹಚಾರ ಕೆಟ್ಟಿತ್ತೋ, ಅವರು ಮಾಡಿದ ಒಂದು ತಪ್ಪಿನಿಂದ ಟ್ರೋಲ್ ಗೊಳಗಾಬೇಕಾಯಿತು.
ಯುಎಇಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಗ್ಗೆ ಶಶಿ ತರೂರ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆಯುವಾಗ ಒಂದು ಸ್ಪೆಲ್ಲಿಂಗ್ ತಪ್ಪು ಮಾಡಿದ್ದರು. Innovation ಎಂದು ಇಂಗ್ಲಿಷ್ ನಲ್ಲಿ ಬರೆಯುವಾಗ ತಪ್ಪಾಗಿ innivation ಎಂದು ಬರೆದರು. ಅಷ್ಟೇ ಸಾಕಾಯಿತು ನೋಡಿ ಟ್ರೋಲಿಗರಿಗೆ.
ಇದೇನು ಹೊಸ ಶಬ್ಧ? ಬಿಡಿ, ಶಶಿ ತರೂರ್ ಎಂದರೆ ಇಂಗ್ಲಿಷ್ ನ ರಜನೀಕಾಂತ್ ಇದ್ದಂತೆ. ಅವರು ಏನೇ ಬರೆದರೂ ಹೊಸ ಶಬ್ಧವಾಗುತ್ತದೆ ಎಂದು ಕೆಲವರು ಲೇವಡಿ ಮಾಡಿದರೆ, ಇನ್ನು ಕೆಲವರು ಹೊಸ ಶಬ್ಧ ಹುಟ್ಟು ಹಾಕಿದರಾ ತರೂರ್ ಸಾಹೇಬರು, ಗೂಗಲ್ ನಲ್ಲಿ ಹುಡುಕಿ ನೋಡಿದೆ ಎಂದು ತಮಾಷೆ ಮಾಡಿದ್ದಾರೆ. ಇಷ್ಟೆಲ್ಲಾ ಟ್ರೋಲ್ ಗೊಳಗಾದ ಮೇಲೆ ತಮ್ಮ ತಪ್ಪು ತಿದ್ದಿಕೊಂಡ ತರೂರ್ ತಪ್ಪಾಯ್ತು, ಅದು innovation ಆಗಬೇಕಿತ್ತು ಎಂದು ತಿದ್ದಿಕೊಂಡು ಟ್ವೀಟ್ ಮಾಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.