ಮೊಮ್ಮಗನಿಗೆ ಮುದ್ದಾದ ಹೆಸರಿಟ್ಟ ಸುಮಲತಾ, ಅಂಬಿ ಆಸೆಯಂತೆ ನೆರವೇರಿದ ತೊಟ್ಟಿಲು ಶಾಸ್ತ್ರ

Sampriya

ಭಾನುವಾರ, 16 ಮಾರ್ಚ್ 2025 (13:21 IST)
Photo Courtesy X
ಬೆಂಗಳೂರು: ಸುಮಲತಾ ಹಾಗೂ ಅಂಬರೀಶ್ ಅವರ ಮೊಮ್ಮಗನಿಗೆ ರಾಣಾ ಅಮರ್ ಎಂದು ನಾಮಕರಣ ಮಾಡಲಾಗಿದೆ. ಬೆಂಗಳೂರಿನ ಹೊಟೇಲ್‌ನಲ್ಲಿ ನಡೆದ ಸಮಾರಂಭದಲ್ಲಿ ಅಭಿಷೇಕ್ ಹಾಗೂ ಅವಿವಾ ದಂಪತಿಯ ಪುತ್ರನಿಗೆ ನಾಮಕರಣವನ್ನು ಅದ್ಧೂರಿಯಾಗಿ ನೆರವೇರಿಸಲಾಯಿತು.

ವಿಶೇಷ ಏನೆಂದರೆ ಯಶ್ ಪುತ್ರಿಗೆ ಅಂಬರೀಶ್‌ ನೀಡಿದ್ದ ವಿಶೇಷ ತೊಟ್ಟಿಲಿನಲ್ಲೇ ಶಾಸ್ತ್ರವನ್ನು ಮಾಡುವ ಮೂಲಕ ಅಂಬರೀಶ್ ಆಸೆಯಂತೆ ತೊಟ್ಟಿಲು ಶಾಸ್ತ್ರ ನೆರವೇರಿಸಲಾಗಿದೆ.  ಅದಲ್ಲದೆ ಮಗುವಿಗೆ ಅಂಬರೀಶ್ ಅವರು ಹುಟ್ಟು ಹೆಸರಾದ ಅಮರ್‌ ಎಂದು ಇಡಲಾಗಿದೆ.

ಇನ್ನೂ ಈ ಸಮಾರಂಭದಲ್ಲಿ ಅಂಬರೀಶ್ ಕುಟುಂಬ ಹಾಗೂ ಆಪ್ತ ಸ್ನೇಹಿತರ ಬಳಗದವರು ಪಾಲ್ಗೊಂಡರು. ಈಚೆಗೆ ದರ್ಶನ್ ಹಾಗೂ ಸುಮಲತಾ ನಡುವೆ ಮುನಿಸು ವಿಚಾರ ಸದ್ದು ಮಾಡಿತ್ತು. ಆದರೆ ನಮ್ಮ ಸಂಬಂಧದಲ್ಲಿ ಯಾವುದೇ ಬಿರುಕಿಲ್ಲ. ಸುಮ್ಮನೇ ಊಹಾಪೋಹ ಹಬ್ಬಿಸಬೇಡಿ ಎಂದು ಸುಮಲತಾ ಸ್ವತಃ ಸ್ಪಷ್ಟನೆ ನೀಡಿದ್ದರು.

ದರ್ಶನ್ ಇಲ್ಲದೆ ನಮ್ಮ ಮನೆ ಕಾರ್ಯಕ್ರಮ ನಡೆಯಲ್ಲ ಎಂದು ಸುಮಲತಾ ಹೇಳಿದ್ದರು. ಆದರೆ ಇದೀಗ ದರ್ಶನ್  ನಾಮಕರಣ ಕಾರ್ಯಕ್ರಮದಲ್ಲಿ ದೂರ ಉಳಿದಿರುವುದು ಮತ್ತಷ್ಟು ಊಜಪೋಹಗಳನ್ನು ಹೆಚ್ಚಿಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ