ಆರೋಗ್ಯದ ಬಗ್ಗೆ ಕೋಬ್ರಾ ಅಡಿಯೋ ಲಾಂಚ್ ನಲ್ಲಿ ಸ್ಪಷ್ಟನೆ ಕೊಟ್ಟ ವಿಕ್ರಂ
ಈ ವೇಳೆ ತಮ್ಮ ಆರೋಗ್ಯದ ಬಗ್ಗೆ ಹುಟ್ಟಿಕೊಂಡಿದ್ದ ವದಂತಿಗಳ ಬಗ್ಗೆ ಸ್ವತಃ ವಿಕ್ರಂ ಸ್ಪಷ್ಟನೆ ಕೊಟ್ಟಿದ್ದಾರೆ. ತಮಗೆ ಹೃದಯಾಘಾತವಾಗಿತ್ತು ಎಂಬ ಸುದ್ದಿಗಳನ್ನು ಅವರು ಅಲ್ಲಗಳೆದಿದ್ದಾರೆ.
ಇದು ಕೇವಲ ಹೃದಯದ ಸಣ್ಣ ಸಮಸ್ಯೆಯಾಗಿತ್ತು. ಹೃದಯಾಘಾತವಾಗಿರಲಿಲ್ಲ. ಹಾಗಿದ್ದರೂ ಕೆಲವರು ನನ್ನ ಫೋಟೋವನ್ನು ಎಡಿಟ್ ಮಾಡಿ ನನಗೆ ಏನೋ ಗಂಭೀರವಾದ ಸಮಸ್ಯೆಯಾಗಿದೆ ಎಂದು ಬಿಂಬಿಸಿದರು. ಅವರ ಕ್ರಿಯಾತ್ಮಕತೆಗೆ ಧನ್ಯವಾದಗಳು. ದೇವರ ದಯೆ, ಸ್ನೇಹಿತರು, ಕುಟುಂಬಸ್ಥರ ಹಾರೈಕೆ ನನಗಿತ್ತು. ಇದಕ್ಕಿಂತ ದೊಡ್ಡದು ನನಗೆ ಬೇರೇನೂ ಬೇಕಾಗಿಲ್ಲ ಎಂದಿದ್ದಾರೆ.