ವಿಕ್ರಾಂತ್ ರೋಣ ಸಿನಿಮಾದ ಹೊಸ ಹಾಡು ಇಂದು ಲಾಂಚ್
ಈಗಾಗಲೇ ಎರಡು ಹಾಡುಗಳು ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿವೆ. ರಾ ರಾ ರಕ್ಕಮ್ಮ ಎನ್ನುವ ಮಾಸ್ ಹಾಡಂತೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿತ್ತು. ಇದಾದ ಬಳಿಕ ವಿಜಯ್ ಪ್ರಕಾಶ್ ಧ‍್ವನಿಯಲ್ಲಿ ಮಗಳಿಗೆ ತಂದೆ ಹಾಡುವ ಲಾಲಿ ಹಾಡು ಬಿಡುಗಡೆಯಾಗಿತ್ತು.
ಇದೀಗ ನಿರೂಪ್ ಭಂಡಾರಿ ಕಾಣಿಸಿಕೊಳ್ಳಲಿರುವ ಹೇ ಫಕೀರ ಎನ್ನುವ ಮತ್ತೊಂದು ಹಾಡು ಇಂದು ಸಂಜೆ 5.02 ಕ್ಕೆ ಲಹರಿ ಮ್ಯೂಸಿಕ್ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ.