ಮತ್ತೊಮ್ಮೆ ತೆಲುಗು ಚಿತ್ರದಲ್ಲಿ ಮೋಡಿಮಾಡಲು ಹೊರಟ ತಮಿಳು ಸಂಗೀತ ನಿರ್ದೇಶಕ

ಬುಧವಾರ, 23 ಡಿಸೆಂಬರ್ 2020 (16:31 IST)
ಹೈದರಾಬಾದ್ : ತಮಿಳು ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ ಗಿಬ್ರಾನ್ ಮತ್ತೊಮ್ಮೆ ತೆಲುಗಿನ ಪ್ರೇಕ್ಷಕರಿಗೆ ಹುಚ್ಚೆದ್ದು ಕುಣಿಸಲು ಹೊರಟಿದ್ದಾರೆ.  

ತೆಲುಗಿನಲ್ಲಿ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ ಗಿಬ್ರಾನ್ ಅವರು ಉತ್ತಮ ಹಾಡುಗಳನ್ನು ನೀಡಿದ್ದಾರೆ. ಪ್ರಭಾಸ್ ಅಭಿನಯದ ‘ಸಾಹೋ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇವರು ಹಲವು ಪುರಸ್ಕಾರಗಳನ್ನು ಪಡೆದಿದ್ದಾರೆ.  ಸಾಹೋ ಚಿತ್ರದ ಬಳಿಕ ಗಿಬ್ರಾನ್ ತೆಲುಗು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿಲ್ಲ.

ಆದರೆ ಇದೀಗ ಅವರು ಹೊಸ ನಿರ್ದೇಶಕರು ಪ್ರದರ್ಶಿಸುತ್ತಿರುವ ಚಿತ್ರಕ್ಕಾಗಿ ಸಂಗೀತ ಸಂಯೋಜನೆ ಮಾಡಲು ಗಿಬ್ರಾನ್ ಸಹಿ ಹಾಕಿದ್ದಾರೆ ಎನ್ನಲಾಗಿದೆ. ನಿರ್ದೇಶಕ ಬಾಲಾಜಿ ನಿರ್ಮಿಸುತ್ತಿರುವ ಚಿತ್ರಕ್ಕಾಗಿ ಗಿಬ್ರಾನ್ ಹೊಸ ಪ್ರೊಡಕ್ಷನ್ ಹೌಸ್ ನಲ್ಲಿ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ