ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಕಿರುತೆರೆ ನಟಿ ಮಾನ್ಸಿ ಜೋಶಿ

Sampriya

ಸೋಮವಾರ, 21 ಅಕ್ಟೋಬರ್ 2024 (18:57 IST)
Photo Courtesy X
ಬೆಂಗಳೂರು; ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪಾರು ಸೀರಿಯಲ್‌ನಲ್ಲಿ ಖಳನಾಯಕಿಯಾಗಿ ಖ್ಯಾತಿ ಗಳಿಸಿದ್ದ ಮಾನ್ಸಿ ಜೋಶಿ ಅವರ ನಿಶ್ಚಿತಾರ್ಥ ಈಚೆಗೆ ಅದ್ಧೂರಿಯಾಗಿ ನಡೆಯಿತು.

ನಿಶ್ಚಿತಾರ್ಥದ ಸುಂದರ ಕ್ಷಣಗಳ ಫೋಟೋಗಳನ್ನು ಮಾನ್ಸಿ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.  ಪಾರು ಸೀರಿಯಲ್‌ನಿಂದ ಫೇಮಸ್ ಆದ ಮಾನ್ಸಿ ಅವರು ಸದ್ಯ ತೆಲುಗು ಹಾಗೂ ತಮಿಳು ಸೀರಿಯಲ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.

ನಟಿ ಮಾನ್ಸಿ ಅವರು ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ರಾಘವ್ ಅವರನ್ನು ಕೈ ಹಿಡಿಯಲಿದ್ದಾರೆ.

ಇವರ ನಿಶ್ಚಿತಾರ್ಥ  ಬೆಂಗಳೂರಿನ ಬನಶಂಕರಿಯಲ್ಲಿ ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು. ಇವರ ವಿವಾಹವು ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿದೆ.

ಬಿಗ್‌ಬಾಸ್ ಸ್ಪರ್ಧಿಯಾಗಿರುವ ಮೋಕ್ಷಿತಾ ಪೈ ಅವರ ಆತ್ಮೀಯ ಗೆಳತಿಯಾಗಿದ್ದಾರೆ.  ಎಂಗೇಜ್‌ಮೆಂಟ್ ಫೋಟೋ ನೋಡಿ ಅವರ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ