ಮತ್ತೆ ಸ್ಯಾಂಡಲ್ ವುಡ್ ಗೆ ಬರ್ತಿದ್ದಾರೆ ತೆಲುಗಿನ ಈ ಖ್ಯಾತ ಕಾಮಿಡಿಯನ್

ಶುಕ್ರವಾರ, 27 ಆಗಸ್ಟ್ 2021 (10:00 IST)
ಬೆಂಗಳೂರು: ತೆಲುಗು ಸಿನಿಮಾದಲ್ಲಿ ಖ್ಯಾತರಾಗಿರುವ ಕಾಮಿಡಿಯನ್ ಅಲಿ ಈಗ ಮತ್ತೊಮ್ಮೆ ಸ್ಯಾಂಡಲ್ ವುಡ್ ಗೆ ಬರಲಿದ್ದಾರೆ.


ಏಳು ವರ್ಷಗಳ ಹಿಂದೆ ನಮೋ ಭೂತಾತ್ಮ ಸಿನಿಮಾದಲ್ಲಿ ಅಭಿನಯಿಸಿದ್ದ ಅಲಿ ಈಗ ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸಲಿದ್ದಾರೆ. ಬಿಗ್ ಬಾಸ್ ಖ‍್ಯಾತಿಯ ನಟ ರಾಜೀವ್ ಅಭಿನಯದ ಉಸಿರೇ ಉಸಿರೇ ಸಿನಿಮಾದಲ್ಲಿ ಅವರು ಪಾತ್ರ ಮಾಡಲಿದ್ದಾರೆ.

ಈ ಸಿನಿಮಾದಲ್ಲಿ ಅವರು ತೆಲುಗು ಮತ್ತು ಕನ್ನಡ ಮಿಕ್ಸ್ ಭಾಷೆ ಮಾತನಾಡಲಿದ್ದಾರಂತೆ. ಕೇವಲ ಕಾಮಿಡಿ ಪಾತ್ರಕ್ಕಷ್ಟೇ ಸೀಮಿತವಾಗದೇ ಕ್ಲೈಮ್ಯಾಕ್ಸ್ ನಲ್ಲಿ ಅವರ ಪಾತ್ರಕ್ಕೆ ತೂಕವಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ