ಮಗನ ಮದುವೆ ಸಂಭ್ರಮದಲ್ಲಿ ಶ್ರೀಮಂತ ಕಾಮಿಡಿಯನ್ ಬ್ರಹ್ಮಾನಂದಂ

ಶನಿವಾರ, 19 ಆಗಸ್ಟ್ 2023 (10:00 IST)
Photo Courtesy: Twitter
ಹೈದರಾಬಾದ್: ಭಾರತದ ಶ್ರೀಮಂತ ಕಾಮಿಡಿಯನ್ ಆಗಿರುವ ತೆಲುಗು ನಟ ಬ್ರಹ್ಮಾನಂದಂ ಈಗ ಮಗನ ಮದುವೆ ಸಂಭ್ರಮದಲ್ಲಿದ್ದಾರೆ.

ಬ್ರಹ್ಮಾನಂದಂ ಪುತ್ರ ಸಿದ್ಧಾರ್ಥ್ ಮತ್ತು ಐಶ್ವರ್ಯಾ ಮದುವೆ ಆರತಕ್ಷತೆ ನಿನ್ನೆ ಹೈದರಾಬಾದ್ ನ ಐಟಿಸಿ ಕೊಹಿನೂರ್ ಹೋಟೆಲ್ ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಸಿದ್ಧಾರ್ಥ್ ವಿದೇಶದಲ್ಲಿ ವ್ಯಾಸಂಗ ಮುಗಿಸಿದ್ದು, ಐಶ್ವರ್ಯಾ ವೃತ್ತಿಯಲ್ಲಿ ವೈದ್ಯೆ. ಇಬ್ಬರದ್ದೂ ಹಿರಿಯರು ನಿಶ್ಚಯಿಸಿದ ಮದುವೆ ಎನ್ನಲಾಗಿದೆ.

ಈ ಆರತಕ್ಷತೆಗೆ ತೆಲುಗು ಸ್ಟಾರ್ ನಟರ ದಂಡೇ ಹರಿದುಬಂದಿದೆ. ಪವನ್ ಕಲ್ಯಾಣ್, ರಾಮ್ ಚರಣ್ ದಂಪತಿ, ನಂದಮೂರಿ ಬಾಲಕೃಷ್ಣ, ವೆಂಕಯ್ಯ ನಾಯ್ಡು, ಸಿಎಂ ಕೆ ಚಂದ್ರಶೇಖರ್ ರಾವ್ ಸೇರಿದಂತೆ ಸಿನಿ, ರಾಜಕೀಯ ಗಣ್ಯಾತಿಗಣ್ಯರು ಆಗಮಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ