ಅವಕಾಶಕ್ಕಾಗಿ ಯಶ್ ನನ್ನ ಬಳಿ ಕಣ್ಣೀರಿಟ್ಟಿದ್ದರು ಎಂದಿದ್ದಕ್ಕೆ ಟ್ರೋಲ್ ಆದ ತಮಿಳು ನಟ

ಶುಕ್ರವಾರ, 18 ಆಗಸ್ಟ್ 2023 (15:56 IST)
ಬೆಂಗಳೂರು: ಇಂದು ರಾಕಿಂಗ್ ಸ್ಟಾರ್ ಯಶ್ ಆಗಿ ಸಿನಿ ಮಾರ್ಕೆಟ್ ನಲ್ಲಿ ಭಾರೀ ಬೇಡಿಕೆಯಲ್ಲಿರುವ ನಟ ಈ ಹಿಂದೆ ಅವಕಾಶಕ್ಕಾಗಿ ನನ್ನ ಬಳಿ ಕಣ್ಣೀರು ಹಾಕಿದ್ದರು. ಅವರಿಗೆ ಹೊಟ್ಟೆ ತುಂಬ ಊಟ ಹಾಕಿದ್ದೆ ಎಂದು ತಮಿಳು ನಟ ಜೈ ಆಕಾಶ್ ಹೇಳಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ನಟ ಜೈ ಆಕಾಶ್ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ. ಆದರೆ ಇದು ಎಷ್ಟು ಸತ್ಯವೋ ಸುಳ್ಳೋ ಗೊತ್ತಿಲ್ಲ. ಯಶ್ ಅಭಿಮಾನಿಗಳಂತೂ ಆಕಾಶ್ ಅವರ ಈ ಹೇಳಿಕೆ ನಂಬಲು ತಯಾರಿಲ್ಲ.

ಆಕಾಶ್ ಹೇಳಿಕೆಯನ್ನು ಯಶ್ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ. ಪ್ರಚಾರಕ್ಕಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ರಾಕಿ ಭಾಯಿ ತಮಿಳು ನಟರ ಬಳಿ ಸಹಾಯ ಕೇಳಲು ಸಾಧ‍್ಯವೇ ಇಲ್ಲ ಎನ್ನುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ