ಸುಶಾಂತ್ ಸಿಂಗ್ ಕುರಿತ ಸಿನಿಮಾ: ಕೋರ್ಟ್ ಮೊರೆ ಹೋದ ತಂದೆ

ಶನಿವಾರ, 19 ಆಗಸ್ಟ್ 2023 (08:50 IST)
ಮುಂಬೈ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಬಗ್ಗೆ ನಿರ್ಮಿಸಲಾಗಿರುವ ಸಿನಿಮಾ ವಿರುದ್ಧ ಸುಶಾಂತ್ ತಂದೆ ಕೋರ್ಟ್ ಮೆಟ್ಟಿಲೇರಿದ್ದಾರೆ.

ಸುಶಾಂತ್ ಜೀವನಾಧಾರಿತ ಕತೆಯುಳ್ಳ ನ್ಯಾಯ್ ಎನ್ನುವ ಸಿನಿಮಾವೊಂದು ನಿರ್ಮಾಣ ಮಾಡಲಾಗಿದೆ.  ಈ ಸಿನಿಮಾ ಈಗ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ.

ಇದೀಗ ಆ ಸಿನಿಮಾವನ್ನು ಒಟಿಟಿಯಿಂದಲೂ ಕಿತ್ತು ಹಾಕಬೇಕೆಂದು ಸುಶಾಂತ್ ಸಿಂಗ್ ಕೆಕೆ ಸಿಂಗ್ ಕೋರ್ಟ್ ಮೆಟ್ಟಿಲೇರಿದ್ದಾರೆ.  2020 ರಲ್ಲಿ ಸುಶಾಂತ್ ತಮ್ಮ ಫ್ಲ್ಯಾಟ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಸಾವಿನ ಬಗ್ಗೆ ಅನೇಕ ಅನುಮಾನಗಳಿವೆ. ಬಾಲಿವುಡ್ ನ ಡ್ರಗ್ ಮಾಫಿಯಾಗೆ ಅವರು ಬಲಿಯಾದರು ಎಂಬ ಆರೋಪಗಳೂ ಇದ್ದವು. ಇದನ್ನೇ ಕತೆಯಾಗಿಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಈ ಮೊದಲು ಹೈಕೋರ್ಟ್ ನ ಏಕಸದಸ್ಯ ಪೀಠ ಕೆಕೆ ಸಿಂಗ್ ತಡೆ ಕೋರಿ ನೀಡಿದ್ದ ಅರ್ಜಿಯನ್ನು ತಳ್ಳಿ ಹಾಕಿತ್ತು. ಹೀಗಾಗಿ ಈಗ ಆ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ