ನಟಿ ಊರ್ವಶಿ ರಾಟೆಲ್ಲಾ ಅವರಿಗೆ ಡ್ಯಾನ್ಸ್ ಮಾಡಲು ಇವರೇ ಸ್ಫೂರ್ತಿಯಂತೆ

ಮಂಗಳವಾರ, 29 ಸೆಪ್ಟಂಬರ್ 2020 (11:44 IST)
ಹೈದರಾಬಾದ್ : ಸಾಮಾಜಿಕ ಜಾಲತಾಣಗಳಲ್ಲಿ  ಹಾಟ್ ಫೋಟೊಗಳನ್ನು ಶೇರ್ ಮಾಡುತ್ತಿದ್ದ, ನಟಿ ಊರ್ವಶಿ ರಾಟೆಲ್ಲಾ ಅವರು ಇದೀಗ ತಾವು ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.

ಹೌದು. ನಟಿ ಊರ್ವಶಿ ರಾಟೆಲ್ಲಾ ಅವರು ನಟನೆಯಲ್ಲಿ ಮಾತ್ರವಲ್ಲ ತಮ್ಮ ಸೊಂಟ ಬಳುಕಿಸಿ ನರ್ತನ ಮಾಡುವುದರಲ್ಲಿ ಪ್ರಸಿದ್ಧರು. ಇವರು ಇತ್ತಿಚೆಗೆ ತಮ್ಮ ನೃತ್ಯದ ವಿಡಿಯೋವೊಂದನ್ನು ಶೇರ್ ಮಾಡಿ ಇದು ನನ್ನ ದಕ್ಷಿಣ ಭಾರತದ ನೃತ್ಯ ಶೈಲಿ ಎಂದು ಕ್ಯಾಪ್ಷನ್ ನೀಡಿದ್ದಾರೆ.

ಹಾಗೇ ಅವರು ನಟ ಅಲ್ಲು ಅರ್ಜುನ್ ರೀತಿ ಡ್ಯಾನ್ಸ್ ಮಾಡುತ್ತಿದ್ದು,  ನನಗೆ ಈ ರೀತಿ ನೃತ್ಯ ಮಾಡಲು ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್  ಸ್ಫೂರ್ತಿ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ