ಬೆಂಗಳೂರು ನಾಗರತ್ನಮ್ಮ ಜೀವನಕತೆ ಸಿನಿಮಾದಲ್ಲಿ ನಟಿಸಲಿದ್ದಾರಂತೆ ಈ ನಟಿ

ಮಂಗಳವಾರ, 1 ಸೆಪ್ಟಂಬರ್ 2020 (11:25 IST)
ಹೈದರಾಬಾದ್ : ಕರ್ನಾಟಕ ಸಂಗೀತದ ಖ್ಯಾತ ಗಾಯಕಿ ಬೆಂಗಳೂರು ನಾಗರತ್ನಮ್ಮ ಅವರ ಜೀವನ ಕತೆಯನ್ನು ಸಿನಿಮಾ ಮಾಡಲು ಮುಂದಾಗಿದ್ದು, ಇದರಲ್ಲಿ ಅನುಷ್ಕಾ ನಾಗರತ್ನಮ್ಮನವರ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ.

ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ ಅವರು ಈ ಸಿನಿಮಾ ಮಾಡಲು ಮುಂದಾಗಿದ್ದು, ಇದರಲ್ಲಿ ನಾಗರತ್ನಮ್ಮನವರ ಪಾತ್ರ ಮಾಡಲು ಅನುಷ್ಕಾ ಹಾಗೂ ಸಮಂತಾ ಹೆಸರು ಕೇಳಿಬಂದಿತ್ತು. ಬಳಿಕ ಅನುಷ್ಕಾ ನಟಿಸುವುದು ಬಹುತೇಕ ಖಚಿತವಾಗಿತ್ತು.ಆದರೆ ಅನುಷ್ಕಾ ಇದಕ್ಕೆ ಒಪ್ಪದ ಕಾರಣ ಈಗ ಈ ಸಿನಿಮಾ ಸಮಂತಾ ಪಾಲಾಗಿದೆ ಎನ್ನಲಾಗಿದೆ.

ಈ ಸಿನಿಮಾವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣ ಮಾಡುತ್ತಿದೆ. ಅಲ್ಲದೇ ಚಿತ್ರತಂಡ ಈ ಸಿನಿಮಾವನ್ನು ದಕ್ಷಿಣ ಭಾರತದ ಭಾಷೆಯ ಜೊತೆಗೆ ಹಿಂದಿಯಲ್ಲೂ ರಿಲೀಸ್ ಮಾಡುವ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ