ಸ್ಟಾರ್ ನಟನ ಸಹೋದರಿಯಾಗಿ ಚಿತ್ರರಂಗಕ್ಕೆ ಮತ್ತೆ ಬಂದ ನಟಿ ಅಮೂಲ್ಯ

ಭಾನುವಾರ, 10 ಜೂನ್ 2018 (14:00 IST)
ಬೆಂಗಳೂರು : ಮದುವೆಯ ನಂತರ ಸಿನಿಮಾ ರಂಗದಿಂದ ದೂರ ಉಳಿದ ಚೆಲುವಿನ ಚಿತ್ತಾರದ ಚೆಲುವೆ ನಟಿ ಅಮೂಲ್ಯ ಅವರು ಇದೀಗ ಕನ್ನಡದ ಸ್ಟಾರ್ ನಟರೊಬ್ಬರ ಜೊತೆ ನಟಿಸುವುದರ ಮೂಲಕ ಮತ್ತೆ ಸಿನಿಮಾ ರಂಗಕ್ಕೆ ಕಂಬ್ಯಾಕ್ ಆಗಿದ್ದಾರೆ.


ದುನಿಯಾ ವಿಜಯ್ ಅಭಿನಯದ ‘ಮಾಸ್ತಿ ಗುಡಿ’ ಚಿತ್ರದ ನಂತರ ನಟಿ ಅಮೂಲ್ಯ ಯಾವುದೆ ಸಿನಿಮಾದಲ್ಲಿ ನಟಿಸಿರಲಿಲ್ಲ. ಆದರೆ ಇದೀಗ  ಸ್ಯಾಂಡಲ್ ವುಡ್ ನ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ನಟಿಸುತ್ತಿದ್ದಾರಂತೆ. ಆದರೆ ಈ ಚಿತ್ರದಲ್ಲಿ ಅಮೂಲ್ಯ ಅವರು ದರ್ಶನ್ ಅವರಿಗೆ ನಾಯಕಿಯಾಗಿ ಅಲ್ಲ, ನಾಯಕ ನಟನ ಸಹೋದರಿಯಾಗಿ ಅಭಿನಯಿಸಲಿದ್ದಾರಂತೆ.
ಈ ಚಿತ್ರ ತಮಿಳಿನ ವೇದಾಳಂ ಚಿತ್ರದ ರಿಮೇಕ್‌ ಆಗಿದ್ದು, ಆ ಚಿತ್ರದಲ್ಲಿ  ಅಜಿತ್‌ ಸಹೋದರಿಯಾಗಿ ಲಕ್ಷ್ಮೀ ಮೆನನ್‌ ಅವರು ನಟಿಸಿದ ಪಾತ್ರವನ್ನು ಕನ್ನಡದಲ್ಲಿ ಅಮೂಲ್ಯ ಅವರು  ಮಾಡಲಿದ್ದಾರಂತೆ. ಈಗಾಗಲೇ ಈ ಕುರಿತು  ಒಂದು ಸುತ್ತಿನ ಮಾತುಕತೆ ಕೂಡ ಆಗಿದೆ ಎಂಬುದಾಗಿ ಸ್ವತಃ ಅಮೂಲ್ಯ ಅವರೇ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ