ಜಾತಕದಲ್ಲಿರುವ ನವಗ್ರಹ ದೋಷಕ್ಕೆ ಈ ನವಧಾನ್ಯಗಳ ದಾನವೇ ಪರಿಹಾರ

ಭಾನುವಾರ, 10 ಜೂನ್ 2018 (13:56 IST)
ಬೆಂಗಳೂರು : ಹೆಚ್ಚಿನವರ ಜಾತಕದಲ್ಲಿ ಗ್ರಹದೋಷಗಳು ಕಂಡುಬರುತ್ತದೆ. ಇದರಿಂದ ಅವರು ಅನೇಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಈ ದೋಷಗಳನ್ನು ನಿವಾರಿಸಲು ನವಧಾನ್ಯಗಳ ದಾನ ನೀಡಬೇಕಾಗುತ್ತದೆ. ನವಧಾನ್ಯಗಳ ಸೇವನೆಯಿಂದ ಆರೋಗ್ಯ ಸುಧಾರಿಸುವುದು ಮಾತ್ರವಲ್ಲ ಇದರಿಂದ ಗ್ರಹದೋಷಗಳನ್ನು ಪರಿಹರಿಸಿಕೊಳ್ಳಬಹುದು. ಯಾವ ಗ್ರಹದೋಷಕ್ಕೆ ಯಾವ ಧಾನ್ಯ ದಾನ ಮಾಡಬೇಕು ಎಂಬುದು ಇಲ್ಲಿದೆ ನೋಡಿ.


*ಸೂರ್ಯ ಗ್ರಹದಿಂದ ಎದುರಾಗುವ ಸಮಸ್ಯೆಗಳ ಪರಿಹಾರಕ್ಕೆ  ಪ್ರತಿ ಭಾನುವಾರ ನವಗ್ರಹಗಳಿಗೆ 2 ಪ್ರದಕ್ಷಿಣೆ ಹಾಕಿ ¼ ಕೆಜಿ ಗೋಧಿಯನ್ನು ದಕ್ಷಿಣೆ ಸಹಿತ ಧಾನ ಮಾಡಬೇಕು.

*ಚಂದ್ರ ಗ್ರಹದಿಂದ ಎದುರಾಗುವ ಸಮಸ್ಯೆಗಳ ಪರಿಹಾರಕ್ಕೆ  ಪ್ರತಿ ಸೋಮವಾರ ನವಗ್ರಹಗಳಿಗೆ 5 ಪ್ರದಕ್ಷಿಣೆ ಹಾಕಿ 1/4 ಕೆಜಿ ಅಕ್ಕಿ ದಕ್ಷಿಣೆ ಸಹಿತ ದಾನ ಮಾಡಬೇಕು.

*ಕುಜ ಗ್ರಹ ದೋಷಕ್ಕೆ ಪ್ರತಿ ಮಂಗಳವಾರ ನವಗ್ರಹಗಳಿಗೆ 9 ಪ್ರದಕ್ಷಿಣೆ ಹಾಕಿ 100ಗ್ರಾಂ ತೊಗರಿಬೇಳೆ ದಕ್ಷಿಣೆ ಸಹಿತ ದಾನ ಮಾಡಬೇಕು.

* ಬುಧ ಗ್ರಹದಿಂದ ಎದುರಾಗುವ ಸಮಸ್ಯೆಗಳ ಪರಿಹಾರಕ್ಕೆ  ಪ್ರತಿ ಬುಧವಾರ ನವಗ್ರಹಗಳಿಗೆ 4ಪ್ರದಕ್ಷಣೆ ಹಾಕಿ 100 ಗ್ರಾಂ ಹೆಸರುಕಾಳು ದಾನ ಮಾಡಬೇಕು.

* ಗುರು ಗ್ರಹ ದೋಷ ನಿವಾರಣೆಗೆ ಪ್ರತಿ ಗುರುವಾರ ನವಗ್ರಹಗಳಿಗೆ 5 ಪ್ರದಕ್ಷಿಣೆ ಹಾಕಿ 100ಗ್ರಾಂ ಕಡಲೆಕಾಳು ಸಹಿತ ದಾನ ಮಾಡಬೇಕು.

* ಶುಕ್ರ ಗ್ರಹ ದೋಷ ನಿವಾರಣೆಗೆ ಪ್ರತಿ ಶುಕ್ರವಾರ ನವಗ್ರಹಗಳಿಗೆ 6 ಪ್ರದಕ್ಷಿಣೆ ಹಾಕಿ 100 ಗ್ರಾಂ ಅವರೆಕಾಳು ದಕ್ಷಿಣೆ ಸಹಿತ ದಾನ ಮಾಡಬೇಕು.
*  ಶನಿ ಗ್ರಹ ದೋಷಕ್ಕೆ ಪ್ರತಿ ಶನಿವಾರ ನವಗ್ರಹಗಳಿಗೆ 7 ಪ್ರದಕ್ಷಿಣೆ ಹಾಕಿ 50ಗ್ರಾಂ ಕಪ್ಪು ಎಳ್ಳು ದಕ್ಷಿಣೆ ಸಹಿತ ದಾನ ಮಾಡಬೇಕು.

*ರಾಹು ಗ್ರಹ ದೋಷಕ್ಕೆ ಪ್ರತಿ ಶನಿವಾರ ನವಗ್ರಹಗಳಿಗೆ 9 ಪ್ರದಕ್ಷಿಣೆ ಹಾಕಿ 100 ಗ್ರಾಂ ಉದ್ದಿನಬೇಳೆ ಸಹಿತ ದಾನ ಮಾಡಬೇಕು.

* ಕೇತು ಗ್ರಹ ದೋಷಕ್ಕೆ ಪ್ರತಿ ಮಂಗಳವಾರ ನವಗ್ರಹಗಳಿಗೆ 9 ಪ್ರದಕ್ಷಿಣೆ ಹಾಕಿ 100 ಗ್ರಾಂ ಹುರುಳಿಕಾಳು ದಕ್ಷಿಣೆ ಸಹಿತ ದಾನ ಮಾಡಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ