ಕಣ್ಣಿನ ಕೆಳಭಾಗ ಉಬ್ಬಿಕೊಂಡಿದ್ದರೆ ಈ ಪುಡಿಯನ್ನು ಹಚ್ಚಿ

ಭಾನುವಾರ, 10 ಜೂನ್ 2018 (13:58 IST)
ಬೆಂಗಳೂರು : ಕೆಲವರ ಕಣ್ಣಿನ ಕೆಳಭಾಗ ಉಬ್ಬಿಕೊಂಡಿರುತ್ತದೆ. ಬೆಳಿಗ್ಗೆ ಅದು ಇನ್ನಷ್ಟುಹೆಚ್ಚಾಗಿರುತ್ತದೆ. ಇದು ಬೇರೆಯವರಿಗೆ ನೋಡಲು ಅಸಹ್ಯವಾಗಿ ಕಾಣಿಸುತ್ತದೆ  ಇಂತವರು ಹೊರಗಡೆ ಹೋಗಲು ಕೂಡ ಮುಜುಗರ ಪಡುತ್ತಾರೆ. ಈ ಸಮಸ್ಯೆಯನ್ನು ನಿವಾರಿಸಲು ಕೆಫೀನ್ ಎಂಬ ಅಂಶ ತುಂಬಾ ಸಹಕಾರಿ.


ಹೌದು ಕಣ್ಣುಗಳ ಕೆಳಭಾಗ ಉಬ್ಬಿಕೊಂಡಿದ್ದರೆ ಇದಕ್ಕೆ ಕೆಫೀನ್ ಉತ್ತಮ ಪರಿಹಾರ ನೀಡುತ್ತದೆ. ಇದು ಹೆಚ್ಚಾಗಿ ನಾವು ಬಳಸುವ ಕಾಫಿ ಬೀಜದಲ್ಲಿ ಕಂಡುಬರುತ್ತದೆ. ಕಾಫಿ ಬೀಜಗಳ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಕಣ್ಣಿನ ಕೆಳಭಾಗಕ್ಕೆ ಹಚ್ಚುವುದರಿಂದ ಉಬ್ಬಿಕೊಂಡಿರುವ ಸಮಸ್ಯೆ ಕಡಿಮೆಯಾಗುತ್ತದೆ. ಹಾಗೇ ಕಣ್ಣಿಗೆ ಆರೈಕೆ ನೀಡುವ ಕ್ರೀಂ ನಲ್ಲಿರುವ ಘಟಕಗಳನ್ನು ಗಮನಿಸಿ. ಅದರಲ್ಲಿ ಒಂದು ವೇಳೆ ಕೆಫೀನ್ ಇದ್ದರೆ ಉಬ್ಬಿದ ಕಣ್ಣುಗಳ ಕೆಳಭಾಗ ಶೀಘ್ರವೇ ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ