ಅವರಿವರ ಜೊತೆ ಮಲಗಿ ತ್ರಿಶಾ ನಾಯಕಿಯಾದರು ಎಂದ ನಟಿ

ಶನಿವಾರ, 1 ಆಗಸ್ಟ್ 2020 (11:33 IST)
ಚೆನ್ನೈ : ತಮಿಳಿನ ಖ್ಯಾತ ನಟಿ ತ್ರಿಶಾ ಅಡ್ಡದಾರಿ ಹಿಡಿಯುವುದರ ಮೂಲಕ ನಾಯಕಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದು ನಟಿ, ಮಾಡೆಲ್ ಮೀರಾ ಮಿಥುನ್ ಆರೋಪ ಮಾಡಿದ್ದಾರೆ.

ತ್ರಿಶಾ ವಿರುದ್ಧ ಆಗಾಗ ಆರೋಪಗಳನ್ನು ಮಾಡುತ್ತಿದ್ದ ಮೀರಾ ಮಿಥುನ್ ಇದೀಗ ಟ್ವೀಟರ್ ನಲ್ಲಿ ತ್ರಿಶಾ ವಿರುದ್ಧ ಗುರುತರ ಆರೋಪ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮೀರಾ ಮಿಥುನ್, ಸಣ್ಣ ಪುಟ್ಟ ಪಾತ್ರ ಮಾಡುತ್ತಿದ್ದ ತ್ರಿಶಾ ಅಡ್ಡದಾರಿ ಹಿಡಿದು ಅವರಿವರ ಜೊತೆ ಮಲಗಿ ನಾಯಕಿಯಾದರು. ಅದೇ ದಾರಿಯಲ್ಲಿ ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಂಡರು. ನನ್ನ ಬಳಿ ಈ ಬಗ್ಗೆ ವಿಡಿಯೋ ಇದೆ. ಈಗಲೂ ಅದೇ ದಾರಿ ಹಿಡಿದು ಚಿತ್ರರಂಗದಲ್ಲಿ ಉಳಿದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ