ನಟ ಶಾರುಖ್ ಖಾನ್ ರನ್ನು ಥಳಿಸಿದ ಹುಡುಗರು

ಭಾನುವಾರ, 18 ಅಕ್ಟೋಬರ್ 2020 (20:33 IST)
ಹುಡುಗರ ಗುಂಪೊಂದು ಬಾಲಿವುಡ್ ನಟ ಶಾರುಖ್ ಖಾನ್ ರನ್ನು ಥಳಿಸಿದೆ.

ಹುಡುಗಿಯೊಬ್ಬಳನ್ನು ತನ್ನ ಗರ್ಲ್ ಫ್ರೆಂಡ್ ಎಂದು ಕರೆದಿದ್ದಕ್ಕಾಗಿ ನಟ ಶಾರುಖ್ ಖಾನ್ ಅವರನ್ನು ದೆಹಲಿಯ ಹುಡುಗರು ಥಳಿಸಿದ್ದಾರೆ.

ಶಾರುಖ್ ಖಾನ್ ಅವರು ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ನಟನ ಆಕರ್ಷಕ ಸ್ವಭಾವ, ಸುಂದರವಾದ ನೋಟ ಮತ್ತು ಮಂದ ನಗು ಹುಡುಗಿಯರನ್ನು ಆಕರ್ಷಿಸದೇ ಇರದು.

ಹೀಗಿದ್ದರೂ ಒಬ್ಬ ಹುಡುಗಿಯನ್ನು ತನ್ನ ಗರ್ಲ್ ಫ್ರೆಂಡ್ ಎಂದು ಕರೆದಿದ್ದಕ್ಕಾಗಿ ನಟ ಶಾರುಖ್ ಖಾನ್ ರನ್ನು  ಒಮ್ಮೆ ದೆಹಲಿ ಹುಡುಗರು ಥಳಿಸಿದ್ದಾರೆ.

ಶಾರುಖ್ ಖಾನ್ ಅವರು ಕಪಿಲ್ ಶರ್ಮಾ ಅವರ ಚಾಟ್ ಶೋನಲ್ಲಿ ಈ ಅನುಭವ ಹಂಚಿಕೊಂಡಿದ್ದಾರೆ. ಗರ್ಲ್ ಫ್ರೆಂಡ್ ಅಲ್ಲ ಅವರು ಹುಡುಗನೊಬ್ಬನ ಭಾಬಿ ಆಗಿದ್ದಕ್ಕೆ ಹಾಗಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ