ತಡರಾತ್ರಿ ಗಂಡನ ಮೊಬೈಲ್ ಚೆಕ್ ಮಾಡಿದ ಪತ್ನಿ ನೋಡಿದ್ದೇನು? ಬಿಗ್ ಶಾಕ್

ಭಾನುವಾರ, 13 ಸೆಪ್ಟಂಬರ್ 2020 (19:49 IST)
ನಸುಕಿನ ಜಾವ ಗಂಡನ ಮೊಬೈಲ್ ಗೆ ಬಂದ ಮೆಸೆಜ್ ಓದಿದ ಪತ್ನಿಗೆ ಆಗಬಾರದ್ದು ಆಗಿಹೋಗಿದೆ.

ವೈಶಾಲ್ ಪಟೇಲ್, ಪ್ರೀತೇಶ್ ಪಟೇಲ್ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದು, ಮಗಳೊಬ್ಬಳು ಇದ್ದಾಳೆ.

ಪತಿ ವೈಶಾಲ್ ಪಟೇಲ್ ಮೊಬೈಲ್ ಗೆ ನಸುಕಿನ ಜಾವ ಮಹಿಳೆಯೊಬ್ಬಳಿಂದ ಮೆಸೆಜ್ ಬಂದಿದೆ. ಮಹಿಳೆಯೊಂದಿಗೆ ಪತಿ ಚಾಟ್ ಮಾಡಿದ್ದನ್ನು ಪತ್ನಿ ಪ್ರೀತೇಶ್ ನೋಡಿದ್ದಾಳೆ.

ಇಬ್ಬರ ನಡುವೆ ನಡೆದಿರುವ ಸಂಭಾಷಣೆ ಆಡಿಯೋಗಳನ್ನೂ ಕೇಳಿಸಿಕೊಂಡಿದ್ದು, ಪತಿಗೆ ಪ್ರಶ್ನೆ ಮಾಡಿದ್ದಾಳೆ.

ಇದರಿಂದ ಗರಂ ಆದ ಪತಿ ತನ್ನ ಪತ್ನಿಯನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾನೆ.

ಗುಜರಾತ್ ನ ಅಹ್ಮದಾಬಾದ್ ನಲ್ಲಿ ಘಟನೆ ನಡೆದಿದ್ದು, ಪತಿ ವಿರುದ್ಧ ಪತ್ನಿ ಕೇಸ್ ದಾಖಲು ಮಾಡಿದ್ದಾಳೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ