‘ರಂಗ್ ದೇ’ ಚಿತ್ರದ ಪೂರ್ವ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರಂತೆ ಈ ಖ್ಯಾತ ನಟ

ಗುರುವಾರ, 18 ಮಾರ್ಚ್ 2021 (09:28 IST)
ಹೈದರಾಬಾದ್ : ‘ರಂಗ್ ದೇ’ ಮುಂಬರುವ ರೊಮ್ಯಾಂಟಿಕ್ ತೆಲುಗು ಚಿತ್ರವಾಗಿದ್ದು, ಇದರಲ್ಲಿ ಯುವ ನಟ ನಿತಿನ್ ಮತ್ತು ನಟಿ ಕೀರ್ತಿ ಸುರೇಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ಈ ಚಿತ್ರದ ಪೂರ್ವ ಬಿಡುಗಡೆ ಕಾರ್ಯಕ್ರಮಕ್ಕೆ  ಮುಖ್ಯ ಅತಿಥಿಯಾಗಿ ಖ್ಯಾತ ನಟನೊಬ್ಬನ್ನು ಆಹ್ವಾನಿಸಲಾಗಿದೆ ಎನ್ನಲಾಗಿದೆ.

‘ರಂಗ್ ದೇ’ ಚಿತ್ರ ಈ ತಿಂಗಳ 26ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಹಾಗಾಗಿ ನಿರ್ಮಾಪಕರು ಈ ಚಿತ್ರದ  ಪೂರ್ವ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಖ್ಯಾತ ನಟ ಜೂನಿಯರ್ ಎನ್ ಟಿಆರ್ ಅವರನ್ನು ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಇನ್ನೂ ಚಿತ್ರತಂಡ ಈ ಬಗ್ಗೆ ದೃಢಿಕರಿಸಲಿಲ್ಲ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ