ಇಂದು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ ಸೂರ್ಯ ಅಭಿನಯದ ಈ ಚಿತ್ರ

ಗುರುವಾರ, 12 ನವೆಂಬರ್ 2020 (06:40 IST)
ಚೆನ್ನೈ : ನಟ ಸೂರ್ಯ ಅಭಿನಯದ ತಮಿಳು ಚಿತ್ರ ‘ಸೂರರೈ ಪೊಟ್ರು’ ಚಿತ್ರ ನ.12ರಂದು (ಇಂದು) ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ.

ಸೂರ್ಯ ಅವರು ಮಾರುಕಟ್ಟೆಯ ದೃಷ್ಟಿಯಿಂದ ಈ ಚಿತ್ರವನ್ನು ತೆಲುಗಿನಲ್ಲಿಯೂ ಬಿಡುಗಡೆ ಮಾಡಲಿದ್ದಾರೆ. ಇದಕ್ಕೆ ‘ಆಕಾಶಂ ನೀ ಹದುರಾ’ ಎಂಬ ಶೀರ್ಷಿಕೆ ನೀಡಿದ್ದಾರೆ. ಇದು ನ.12ರಂದು (ಇಂದು) ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರ ಒಟಿಟಿ ಪ್ರೇಕ್ಷಕರನ್ನು ಮೆಚ್ಚಿಸಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಈ ಚಿತ್ರ ಏರ್ ಡೆಕ್ಕನ್ ಸಂಸ್ಥಾಪಕ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನದ ಕೆಲವು ಘಟನೆಗಳನ್ನು ಆಧಾರಿಸಿದ ಚಿತ್ರವಾಗಿದ್ದು, ಸುಧಾ ಕೊಂಗರಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಿಖ್ ಎಂಟರ್ ಟೈನ್ ಮೆಂಟ್ ಮತ್ತು 2ಡಿ ಎಂಟರ್ ಟೈನ್ ಮೆಂಟ್ಬ್ಯಾನರ್ ಅಡಿಯಲ್ಲಿ ಸೂರ್ಯ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ