ಚಿರಂಜೀವಿಯವರ ಕೊರೊನಾ ಕ್ರೈಸಿಸ್ ಚಾರಿಟಿಯಿಂದ ಶುರುವಾಗಲಿದೆ ಹೊಸ ಯೋಜನೆ
ಬುಧವಾರ, 7 ಏಪ್ರಿಲ್ 2021 (11:18 IST)
ಹೈದರಾಬಾದ್ : ಕೊರನಾ ಹಾವಳಿಯಿಂದಾಗಿ ಇಡೀ ದೇಶವೇ ಲಾಕ್ ಡೌನ್ ಮಾಡಿದ್ದಾಗ ಚಲನಚಿತ್ರೋದ್ಯಮದ ಸಾವಿರಾರು ಜನರು ಉದ್ಯೋಗವಿಲ್ಲದೆ ಪರದಾಡಿದ್ದಾರೆ. ಅವರ ಸಹಾಯಕ್ಕಾಗಿ ನಟ ಚಿರಂಜೀವಿ ಅವರು ಕೊರೊನಾ ಕ್ರೈಸಿಸ್ ಚಾರಿಟಿ(ಸಿಸಿಸಿ)ಯನ್ನು ಸ್ಥಾಪಿಸಿದ್ದರು.
ಇದೀಗ ಈ ಚಾರಿಟಿಯಲ್ಲಿ ಉಳಿದಿರುವ ಹಣದಿಂದ ಚಿತ್ರರಂಗದ ಕಾರ್ಮಿಕರಿಗೆ ಲಸಿಕೆ ನೀಡಲು ಬಳಸಲಾಗುತ್ತದೆ ಎಂದು ನಟ ಚಿರಂಜೀವಿ ಅವರು ಬಹಿರಂಗಪಡಿಸಿದ್ದಾರೆ. ಚಲನಚಿತ್ರ ಭ್ರಾತೃತ್ವದಿಂದ ಜನರಿಗೆ ಲಸಿಕೆ ನೀಡುವ ಪ್ರಕ್ರಿಯೆಯನ್ನು ಸಮಿತಿ ಶೀಘ್ರದಲ್ಲಿಯೇ ಪ್ರಾರಂಭಿಸುತ್ತದೆ ಎಂದು ಅವರು ಹೇಳಿದ್ದಾರೆ.
ಎಲ್ಲಾ ಚಲನಚಿತ್ರ ಕಾರ್ಮಿಕರಿಗೆ ಲಸಿಕೆ ಹಾಕುವ ಜವಾಬ್ದಾರಿಯನ್ನು ಸಿಸಿಸಿ ಹೊಂದಿದೆ, ವ್ಯಾಕ್ಸಿನೇಷನ್ ಡ್ರೈವ್ ಗಾಗಿ ನಾವು ಕೆಲವು ಹನವನ್ನು ಮೀಸಲಿಟ್ಟಿದ್ದೇವೆ. ಈ ಪ್ರಕ್ರಿಯೆಯನ್ನು ಶೀಘ್ರದಲ್ಲಿಯೇ ಶುರುಮಾಡುತ್ತೇವೆ ಎಂದು ತಿಳಿಸಿದ್ದಾರೆ. ಈ ಚಾರಿಟಿಗೆ ಪ್ರಭಾಸ್, ಜೂನಿಯರ ಎನ್ ಟಿಆರ್, ನಾಗಾರ್ಜುನ್, ರಾಮ್ ಚರಣ್, ಸೇರಿದಂತೆ ಹಲವು ನಟರು ದೇಣಿಗೆ ನೀಡಿದ್ದಾರೆ ಎನ್ನಲಾಗಿದೆ.