‘ಪುಷ್ಪಾ’ ಚಿತ್ರದಲ್ಲಿ ಅತ್ತಿಗೆ -ನಾದಿನಿ ಪಾತ್ರದಲ್ಲಿ ನಟಿಸಲಿದ್ದಾರಂತೆ ಈ ಸ್ಟಾರ್ ನಟಿಯರು

ಶುಕ್ರವಾರ, 12 ಮಾರ್ಚ್ 2021 (09:34 IST)
ಹೈದರಾಬಾದ್ : ನಿರ್ದೇಶಕ ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೀಗ ಈ ಚಿತ್ರದಲ್ಲಿ ಇಬ್ಬರು ಸ್ಟಾರ್ ನಟಿಯರು ಅತ್ತಿಗೆ ನಾದಿನಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಹೌದು. ಪುಷ್ಪಾ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರ ಜೋಡಿಯಾಗಿ ನಟಿ ರಶ್ಮಿಕಾ ಮಂದಣ್ಣ ನಟಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದೆ ಇದೆ. ಇದೀಗ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಸಹೋದರಿಯ ಪಾತ್ರದಲ್ಲಿ ನಟಿ ಸಾಯಿ ಪಲ್ಲವಿ ನಟಿಸಲಿದ್ದಾರಂತೆ.

ಅವರ ದೃಶ್ಯಗಳನ್ನು ಶೀಘ್ರದಲ್ಲಿಯೇ ಚಿತ್ರೀಕರಿಸಲಾಗುವುದು ಎನ್ನಲಾಗಿದೆ. ಹಾಗಾಗಿ ಸಮಕಾಲೀನ ನಟಿಯರಿಬ್ಬರು ಅತ್ತಿಗೆ ನಾದಿನಿ ಪಾತ್ರದಲ್ಲಿ ನಟಿಸುವುದರ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ