ನಟಿ ಅಮೂಲ್ಯ ಪುಟಾಣಿ ಮಕ್ಕಳಿಗೂ ತಗುಲಿತು ಹುಲಿ ಉಗುರಿನ ಸಂಕಷ್ಟ!

ಶನಿವಾರ, 28 ಅಕ್ಟೋಬರ್ 2023 (08:40 IST)
Photo Courtesy: Instagram
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಭಾರೀ ಸದ್ದು ಮಾಡುತ್ತಿರುವ ಹುಲಿ ಉಗುರಿನ ಲಾಕೆಟ್ ಪ್ರಕರಣದಲ್ಲಿ ಈಗ ಚೆಲುವಿನ ಚಿತ್ತಾರ ನಟಿ ಅಮೂಲ್ಯ ಅವಳಿ ಮಕ್ಕಳಿಗೂ ತಟ್ಟಿದೆ.

ಅಮೂಲ್ಯ-ಜಗದೀಶ್ ದಂಪತಿಯ ಪುಟಾಣಿ ಗಂಡು ಮಕ್ಕಳ ಕುತ್ತಿಗೆಗೆ ಹುಲಿ ಉಗುರು ಹೋಲುವ ಲಾಕೆಟ್ ಹಾಕಲಾಗಿತ್ತು. ಇದರ ಬಗ್ಗೆ ಆರೋಪ ಕೇಳಿಬಂದ ಬೆನ್ನಲ್ಲೇ ಅಮೂಲ್ಯ ಸ್ಪಷ್ಟನೆ ಕೊಟ್ಟಿದ್ದಾರೆ.

‘ನನ್ನ ಮಕ್ಕಳ ಕೊರಳಲ್ಲಿದ್ದಿದ್ದು ನಿಜವಾದ ಹುಲಿ ಉಗುರಿನ ಪೆಂಡೆಂಟ್ ಅಲ್ಲ. ಅದು ಸಿಂಥೆಟಿಕ್. 400-500 ರೂ.ಗೆಲ್ಲಾ ಅಂತಹ ಪೆಂಡೆಂಟ್ ಸಿಗುತ್ತದೆ. ಬೇಕಾದಲ್ಲಿ ಅರಣ್ಯ ಇಲಾಖೆಯವರು ಈ ಬಗ್ಗೆ ತನಿಖೆಯನ್ನೂ ಮಾಡಬಹುದು’ ಎಂದು ಅಮೂಲ್ಯ ಸ್ಪಷ್ಟನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ