ಹುಲಿ ಉಗುರು ನಕಲಿಯಾ, ಅಸಲಿಯಾ ಎಂದು ತಿಳಿಯಲು ಇನ್ನು ಎಷ್ಟು ದಿನ ಬೇಕು?
 
ದರ್ಶನ್, ಜಗ್ಗೇಶ್ ಸೇರಿದಂತೆ ಸೆಲೆಬ್ರಿಟಿಗಳ ಮನೆಯಿಂದ ಹುಲಿ ಉಗುರಿನಂತಿರುವ ಪೆಂಡೆಂಟ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಎಲ್ಲವೂ ಅಸಲಿ ಅಲ್ಲ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ಅಧಿಕಾರಿಗಳೇ ಹೇಳಿದ್ದಾರೆ.
									
				ಹಾಗಿದ್ದರೂ ಅವುಗಳನ್ನು ಎಫ್ ಎಸ್ ಎಲ್ ವರದಿಗೆ ಕಳುಹಿಸಿ ಅಸಲಿಯೋ, ನಕಲಿಯೋ ಎಂದು ತಿಳಿದುಕೊಳ್ಳಲಾಗುತ್ತದೆ. ಡೆಹ್ರಾಡೂನ್ ಗೆ ವರದಿಗಾಗಿ ರವಾನಿಸಲಾಗಿದ್ದು, ನಿಜ ತಿಳಿಯಲು ಇನ್ನು ಮೂರರಿಂದ ನಾಲ್ಕು ತಿಂಗಳು ಬೇಕಾಗಲಿದೆ.