ವೈಷ್ಣವ್ ತೇಜ್ ರ ಮೂರನೇ ಚಿತ್ರವನ್ನು ನಿರ್ಮಿಸಲು ಹೊರಟ ಟಾಲಿವುಡ್ ಸ್ಟಾರ್ ನಟ

ಭಾನುವಾರ, 28 ಫೆಬ್ರವರಿ 2021 (11:55 IST)
ಹೈದರಾಬಾದ್ : ಇತ್ತೀಚೆಗೆ ಬಿಡುಗಡೆಯಾದ  ನಟ ವೈಷ್ಣವ್ ತೇಜ್ ಅವರ ‘ಉಪ್ಪೇನಾ’ ಚಿತ್ರ ಉತ್ತಮ ಪ್ರದರ್ಶನ ಕಂಡಿದೆ. ಇದೀಗ ನಟ ವೈಷ್ಣವ್ ತೇಜ್ ಜೊತೆ ಟಾಲಿವುಡ್ ನ ಸ್ಟಾರ್ ನಟರೊಬ್ಬರು ಚಿತ್ರ ಮಾಡಲು ಹೊರಟಿದ್ದಾರೆ.

ನಟ ವೈಷ್ಣವ್ ತೇಜ್ ಅವರು ಪ್ರಸ್ತುತ ತಮ್ಮ 2ನೇ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾಹಿತಿ ಪ್ರಕಾರ ವೈಷ್ಣವ್ ತೇಜ್ ಅವರ 3ನೇ ಚಿತ್ರವನ್ನು ಮನಮ್ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಟ ನಾಗಾರ್ಜುನ ಅವರು ನಿರ್ಮಿಸಲಿದ್ದಾರಂತೆ. ಹೊಸಬರು ನಿರ್ದೇಶನ ಮಾಡಲಿದ್ದಾರಂತೆ. ಶೀಘ್ರದಲ್ಲಿಯೇ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ