ನಟಿ ತ್ರಿಷಾ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ

ಮಂಗಳವಾರ, 17 ಜನವರಿ 2017 (10:48 IST)
ನಟಿ ತ್ರಿಷಾ ಕೃಷ್ಣನ್ ಟ್ವಿಟ್ಟರ್ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದಾರೆ ಎಂದು ಅವರ ತಾಯಿ ಉಮಾ ಕೃಷ್ಣನ್ ಪೊಲೀಸರಿಗೆ ದೂರು ನೀಡಿದ್ದಾರೆ. ಚೆನ್ನೈ ಪೊಲೀಸ್ ಕಮೀಷನರನ್ನು ಭೇಟಿ ಮಾಡಿರುವ ಅವರು, ತ್ರಿಷಾಗೆ ತೊಂದರೆ ಕೊಡಬೇಕು ಎಂಬ ಉದ್ದೇಶದಿಂದ ಆಕೆಯ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿ ಜಲ್ಲುಕಟ್ಟುಗೆ ವಿರುದ್ಧವಾಗಿ ಪೋಸ್ಟ್ ಮಾಡಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ.
 
ಜಲ್ಲಿಕಟ್ಟುಗೆ ನಾನು ವಿರೋಧಿಗಳಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಜಲ್ಲಿಕಟ್ಟುಗೆ ವಿರೋಧ ವ್ಯಕ್ತಪಡಿಸಿ ತ್ರಿಷಾ ಟ್ವೀಟ್ ಮಾಡಿದ್ದರು. ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾಗಿರುವ ಜಲ್ಲಿಕಟ್ಟಿನಲ್ಲಿ ಪ್ರಾಣಿಗಳಿಗೆ ಹಿಂಸೆ ಕೊಡಲಾಗುತ್ತಿದೆ ಎಂದಿದ್ದರು. 
 
ಸುಪ್ರೀಂಕೋರ್ಟ್ 2014ರಲ್ಲಿ ಜಲ್ಲಿಕಟ್ಟುಗೆ ನಿಷೇಧ ಹೇರಿದೆ. ಪ್ರಾಣಿ ದಯಾ ಸಂಘ ಪೆಟಾ ಕಾರ್ಯಕರ್ತೆಯಾಗಿರುವ ತ್ರಿಷಾ ಜಲ್ಲಿಕಟ್ಟುನ್ನು ವಿರೋಧಿಸಿದ್ದರು. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೆಲವರು ತ್ರಿಷಾ ನಿಧನರಾದರೆಂದು ಅವರ ಫೋಟೋಗಳನ್ನು ಹಾಕಿ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದರು. ಈ ರೀತಿಯ ಫೋಟೋಗಳನ್ನು ಹಾಕಿದ್ದನ್ನು ನೋಡಿ ಶಾಕ್ ಆದೆ. ಅಂತವರಿಗೆ ತಮಿಳುನಾಡು ಸಂಪ್ರದಾಯದ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ ಎಂದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ