ಯುವರತ್ನ ಫಸ್ಟ್ ಶೋ ನೋಡಿದ ಪ್ರೇಕ್ಷಕರು ಏನಂತಿದ್ದಾರೆ ಗೊತ್ತಾ?!
ಗುರುವಾರ, 1 ಏಪ್ರಿಲ್ 2021 (10:18 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ಇಂದು ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿದೆ. ಮೊದಲ ಶೋ ನೋಡಿದ ಪ್ರೇಕ್ಷಕರು ಟ್ವಿಟರ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇಂಥಾ ಅವತಾರದಲ್ಲಿ ಪುನೀತ್ ರನ್ನು ಮೊದಲೆಂದೂ ನೋಡಿರಲೇ ಇಲ್ಲ. ಆರಂಭದಿಂದಲೇ ಕತೆ ನೋಡಿಸಿಕೊಂಡು ಹೋಗುತ್ತದೆ. ಅದರಲ್ಲೂ ಪುನೀತ್ ಕಾಲೇಜು ಹುಡುಗನಾಗಿ ಟ್ರಾನ್ಸ್ ಫೋರ್ಮೇಷನ್ ಆಗಿರುವುದು ಅದ್ಭುತ. ಪುನೀತ್ ಜೊತೆಗೆ ಡಾಲಿ ಧನಂಜಯ್, ಪ್ರಕಾಶ್ ರಾಜ್ ಪೈಪೋಟಿಯ ಅಭಿನಯ ನೀಡಿದ್ದಾರೆ. ಒಟ್ಟಿನಲ್ಲಿ ಒಂದು ನಾವೆಲ್ಲರೂ ಚಿಂತನೆ ಮಾಡಬೇಕಾದ ಸಬ್ಜೆಕ್ಟ್ ಸಿನಿಮಾದಲ್ಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಮತ್ತೆ ಕೆಲವರು ಎಲ್ಲಾ ಚೆನ್ನಾಗಿದೆ. ಕೆಲವೊಮ್ಮೆ ಬೋಧನೆ ಅತಿ ಎನಿಸಲೂ ಬಹುದು ಎಂದಿದ್ದಾರೆ. ಇನ್ನು, ಹಿನ್ನಲೆ ಸಂಗೀತ ಕೂಡಾ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ ಎಂದು ಮೊದಲ ಶೋ ನೋಡಿ ಬಂದ ಪ್ರೇಕ್ಷಕರು ಹೊಗಳಿದ್ದಾರೆ. ಒಟ್ಟಿನಲ್ಲಿ ಇದು ಮತ್ತೊಂದು ಫ್ಯಾಮಿಲಿ ಎಂಟರ್ ಟೈನರ್ ಎನ್ನುವುದು ಜನರ ಅಭಿಪ್ರಾಯ.