100 ಕೋಟಿ ಕ್ಲಬ್ ಸೇರಿಕೊಂಡ ರಾಬರ್ಟ್ ಸಿನಿಮಾ

ಗುರುವಾರ, 1 ಏಪ್ರಿಲ್ 2021 (09:45 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ನಿರೀಕ್ಷೆಯಂತೆಯೇ 100 ಕೋಟಿ ಕ್ಲಬ್ ಸೇರಿಕೊಂಡಿದೆ.


ಗಳಿಕೆ ವಿಚಾರದಲ್ಲಿ ಮೊದಲ ದಿನವೇ ದಾಖಲೆ ಮಾಡಿದ್ದ ರಾಬರ್ಟ್ ಈಗ 21 ದಿನ ಪೂರೈಸಿದ್ದು, ಜೊತೆಗೆ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ಕೊಳ್ಳೆ ಹೊಡೆದು ದಾಖಲೆ ಮಾಡಿದೆ.

ಇದಕ್ಕೂ ಮೊದಲು ಕೆಜಿಎಫ್, ಕುರುಕ್ಷೇತ್ರ ಸಿನಿಮಾ 100 ಕೋಟಿ ಗಳಿಕೆ ಮಾಡಿತ್ತು. ಅದಾದ ಬಳಿಕ ಈಗ ರಾಬರ್ಟ್ ಆ ದಾಖಲೆ ಮಾಡುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾದ ರಾಬರ್ಟ್ ಈಗಲೂ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಇದರೊಂದಿಗೆ ತಾವು ಬಾಕ್ಸ್ ಆಫೀಸ್ ಸುಲ್ತಾನ್ ಎನ್ನುವುದನ್ನು ದರ್ಶನ್ ಮತ್ತೆ ಪ್ರೂವ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ