ಗೇಮ್ ಚೇಂಜರ್ ಸಿನಿಮಾ ಸೀನ್ ಲೀಕ್ ಮಾಡಿದ ಇಬ್ಬರು ಯುವಕರು ಅರೆಸ್ಟ್

ಮಂಗಳವಾರ, 7 ನವೆಂಬರ್ 2023 (10:26 IST)
ಹೈದರಾಬಾದ್: ರಾಮ್ ಚರಣ್ ನಾಯಕರಾಗಿರುವ ಗೇಮ್ ಚೇಂಜರ್ ಸಿನಿಮಾದ ದೃಶ್ಯವನ್ನು ಲೀಕ್ ಮಾಡಿದ ಆರೋಪದಲ್ಲಿ ಹೈದರಾಬಾದ್ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ.

ಗೇಮ್ ಚೇಂಜರ್ ಸಿನಿಮಾದ ಸಾಹಸ ದೃಶ್ಯಗಳ ವಿಡಿಯೋವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಈ ಯುವಕರು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದರು. ಈ ಬಗ್ಗೆ ಚಿತ್ರತಂಡ ಪೊಲೀಸರಿಗೆ ದೂರು ನೀಡಿತ್ತು. ಅದರಂತೆ ಇಬ್ಬರನ್ನು ಬಂಧಿಸಲಾಗಿದೆ.

ಈ ರೀತಿ ಚಿತ್ರೀಕರಣ ಹಂತದಲ್ಲಿರುವಾಗಲೇ ಹಲವು ಸಿನಿಮಾಗಳ ದೃಶ್ಯಗಳು ಲೀಕ್ ಆಗಿ ಚಿತ್ರತಂಡಕ್ಕೆ ತೊಂದರೆಯಾಗುವುದು ಇದೆ. ಆದರೆ ಗೇಮ್ ಚೇಂಜರ್ ತಂಡ ಅಂತಹ ಖದೀಮರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ