ಕನ್ನಡದಲ್ಲಿ ಅಮೀರ್ ಪಾತ್ರ ಪೋಷಿಸಲಿರುವ ಉಪೇಂದ್ರ

ಸೋಮವಾರ, 27 ಫೆಬ್ರವರಿ 2017 (12:36 IST)
ಬಾಲಿವುಡ್‌ನ ಬ್ಲಾಕ್ ಬಸ್ಟರ್ ಸಿನಿಮಾ ತ್ರಿ ಈಡಿಯಟ್ಸ್. ಇದೀಗ ಈ ಚಿತ್ರ ಕನ್ನಡಕ್ಕೆ ರೀಮೇಕ್ ಆಗುತ್ತಿದೆ. ಕೆ. ಮಾದೇಶ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ. ಮೂಲ ಚಿತ್ರದಲ್ಲಿ ಅಮೀರ್ ಖಾನ್ ಪೋಷಿಸಿದ್ದ ರಾಂಚೋ ಪಾತ್ರವನ್ನು ಕನ್ನಡಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಪೋಷಿಸಲಿದ್ದಾರೆ ಎನ್ನಲಾಗಿದೆ. 
 
ಹಿಂದಿಯ ಓ ಮೈ ಗಾಡ್ ಚಿತ್ರ ಕನ್ನಡಕ್ಕೆ ಮುಕುಂದ ಮುರಾರಿ ಹೆಸರಿನಲ್ಲಿ ರೀಮೇಕ್ ಆಗಿದ್ದು ಗೊತ್ತೇ ಇದೆ. ಅದಾದ ಬಳಿಕ ಉಪೇಂದ್ರ ಕೈಗೆತ್ತಿಕೊಂಡಿರುವ ಇನ್ನೊಂದು  ರೀಮೇಕ್ ಚಿತ್ರ ಇದು. ಮೂಲಗಳ ಪ್ರಕಾರ ಕರೀನಾ ಕಪೂರ್ ಪಾತ್ರವನ್ನು ರಚಿತಾ ರಾಮ್ ಪೋಷಿಸಲಿದ್ದಾರಂತೆ. 
 
ಉಳಿದ ಪಾತ್ರವರ್ಗ, ತಾಂತ್ರಿಕ ಬಳಗ ಇನ್ನಷ್ಟೇ ಅಂತಿಮವಾಗಬೇಕಿದೆ. ರಾಜೇಶ್ ಕಟ್ಟಾ ಛಾಯಾಗ್ರಹಣ, ಸಾಧು ಕೋಕಿಲಾ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಕನ್ನಡದ ಶೀರ್ಷಿಕೆ ಇನ್ನೂ ಪಕ್ಕಾ ಆಗಿಲ್ಲ. ಉಪೇಂದ್ರ ರೀಮೇಕ್ ಚಿತ್ರಗಳಲ್ಲಿ ಹೆಚ್ಚಾಗಿ ತೊಡಗಿಕೊಂಡಿರುವುದು ಅವರ ಅಭಿಮಾನಿಗಳಿಗೆ ಕೊಂಚ ಅಸಮಾಧಾನಕ್ಕೂ ಕಾರಣವಾಗಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ