ಒಂದು ಬ್ಯಾಡ್ ನ್ಯೂಸ್ ಜೊತೆ ಇನ್ನೊಂದು ಗುಡ್ ನ್ಯೂಸ್ ಕೊಟ್ಟ ವೈಷ್ಣವಿ ಗೌಡ

Krishnaveni K

ಗುರುವಾರ, 22 ಮೇ 2025 (10:20 IST)
ಬೆಂಗಳೂರು: ಸೀತಾರಾಮ ಧಾರವಾಹಿ ಮೂಲಕ ಜನರ ಮನ ಗೆದ್ದಿದ್ದ ನಟಿ ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಒಂದು ಪೋಸ್ಟ್ ಫ್ಯಾನ್ಸ್ ಒಂದು ಬ್ಯಾಡ್ ನ್ಯೂಸ್ ಆದರೆ ಇನ್ನೊಂದು ಗುಡ್ ನ್ಯೂಸ್ ಆಗಿದೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಗಳಲ್ಲಿ ಸೀತಾರಾಮ ಧಾರವಾಹಿ ಕೂಡಾ ಒಂದು. ಕನ್ನಡ ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಗೌಡ ಸೀತಾ ಮತ್ತು ಗಗನ್ ಚಿನ್ನಪ್ಪ ರಾಮನ ಪಾತ್ರದಲ್ಲಿ ಈ ಧಾರವಾಹಿಯಲ್ಲಿ ಪ್ರಮುಖ ಪಾತ್ರವಾಗಿ ಕಾಣಿಸಿಕೊಂಡಿದ್ದರು.

ಈ ಧಾರವಾಹಿ ಈಗ ಅಂತಿಮ ಘಟ್ಟಕ್ಕೆ ಬಂದಿದೆ. ಧಾರವಾಹಿ ಇನ್ನು ಕೆಲವೇ ಎಪಿಸೋಡ್ ಮಾತ್ರ ಪ್ರಸಾರವಾಗಲಿದೆ. ಈಗಾಗಲೇ ಅಂತಿಮ ಸಂಚಿಕೆಯ ಶೂಟಿಂಗ್ ಕೂಡಾ ಮುಗಿದಿದೆ. ಇದರ ಬೆನ್ನಲ್ಲೇ ವೈಷ್ಣವಿ ಗೌಡ ಇನ್ ಸ್ಟಾಗ್ರಾಂನಲ್ಲಿ ತಮ್ಮನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಈ ಧಾರವಾಹಿ ನಿಂತೇ ಹೋಗುತ್ತಿದೆ ಎನ್ನುವುದು ಅಭಿಮಾನಿಗಳ ಪಾಲಿಗೆ ನಿಜಕ್ಕೂ ಬ್ಯಾಡ್ ನ್ಯೂಸ್. ಹೀಗಾಗಿ ವೈಷ್ಣವಿ ಪೋಸ್ಟ್ ಗೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ತಮ್ಮ ಸಂದೇಶದ ಕೊನೆಯಲ್ಲಿ ವೈಷ್ಣವಿ ಇನ್ನೊಂದು ವಿಚಾರವನ್ನೂ ಹೇಳಿದ್ದಾರೆ. ಸದ್ಯದಲ್ಲೇ ಹೊಸ ಪ್ರಾಜೆಕ್ಟ್ ಮೂಲಕ ನಿಮ್ಮ ಮುಂದೆ ಬರಲಿದ್ದೇನೆ ಎಂದಿರುವುದು ನಿಜಕ್ಕೂ ಗುಡ್ ನ್ಯೂಸ್.

ವೈಷ್ಣವಿ ಇತ್ತೀಚೆಗಷ್ಟೇ ಅನುಕೂಲ್ ಮಿಶ್ರಾ ಎಂಬವರ ಜೊತೆಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು ಸದ್ಯದಲ್ಲೇ ಮದುವೆಯಾಗಲಿದ್ದಾರೆ. ಹೀಗಾಗಿ ಮದುವೆ ಬಳಿಕ ಅವರು ಬಣ್ಣದ ಲೋಕದಿಂದ ದೂರವಾಗುತ್ತಾರೇನೋ ಎಂದು ಅಭಿಮಾನಿಗಳಿಗೆ ಬೇಸರವಿತ್ತು. ಆದರೆ ಅವರ ಕೊನೆಯ ಮಾತು ಅಭಿಮಾನಿಗಳಿಗೆ ಖುಷಿ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ