Vaishnavi Gowda: ರಿಯಲ್ ಲೈಫ್ ಗೆಳೆಯನ ಜೊತೆಗೂ ಪಕ್ಕಾ ಸೀತೆಯಂತೇ ಇರ್ತಾರೆ ವೈಷ್ಣವಿ ಗೌಡ
ಮೊನ್ನೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ ಡಿನ್ನರ್ ಡೇಟ್ ಗೆ ತೆರಳಿದೆ. ಡಿನ್ನರ್ ಡೇಟ್ ಗೂ ವೈಷ್ಣವಿ ಮಾಡರ್ನ್ ಡ್ರೆಸ್ ತೊಡದೇ ಸಾಂಪ್ರದಾಯಿಕವಾಗಿ ಚೂಡಿದಾರ್ ನಲ್ಲಿ ಇರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಸಿನಿಮಾ ನಟಿಯರೆಂದರೆ ಪಾರ್ಟಿಗಳಿಗೆ ಹೋಗುವಾಗ ಅರೆಬರೆ ಬಟ್ಟೆ ತೊಟ್ಟು ಹೋಗುತ್ತಾರೆ. ಆದರೆ ವೈಷ್ಣವಿ ಮಾತ್ರ ತಮ್ಮ ತೆರೆ ಮೇಲಿನ ಸೀತಾ ಪಾತ್ರದಂತೇ ನಿಜ ಜೀವನದಲ್ಲೂ ಸಿಂಪಲ್ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಇಬ್ಬರ ಜೋಡಿಯನ್ನು ನೆಟ್ಟಿಗರೂ ಮೆಚ್ಚಿಕೊಂಡಿದ್ದಾರೆ.